ಕರ್ನಾಟಕ

karnataka

ETV Bharat / bharat

ಅನ್ನದಾತರ ನೋವಿಗೆ ಮಣಿಯದ ಮೊಂಡು ಸರ್ಕಾರ.. ಟಿಕ್ರಿ ಗಡಿಯಲ್ಲಿ ಮತ್ತೊಬ್ಬ ಪ್ರತಿಭಟನಾನಿರತ ರೈತ ಸಾವು..

ಟಿಕ್ರಿ ಗಡಿಯಲ್ಲಿ ಪ್ರತಿಭಟಿಸುತ್ತಿದ್ದ ಪಂಜಾಬ್​ನ ಮತ್ತೊಬ್ಬ ರೈತ ಇಂದು ಹೃದಯಾಘಾತದಿಂದಾಗಿ ಸಾವನ್ನಪ್ಪಿದ್ದಾರೆ..

Another protesting farmer died at Tikri border
ಟಿಕ್ರಿ ಗಡಿಯಲ್ಲಿ ಮತ್ತೊಬ್ಬ ಪ್ರತಿಭಟನಾನಿರತ ರೈತ ಸಾವು

By

Published : Jan 23, 2021, 5:31 PM IST

ಮನ್ಸಾ (ಪಂಜಾಬ್​​): ಕೃಷಿ ಕಾನೂನುಗಳ ವಿರುದ್ಧದ ರೈತರ ಧರಣಿ 59ನೇ ದಿನಕ್ಕೆ ಕಾಲಿಟ್ಟಿದ್ದರೂ, ಕಾಯ್ದೆಗಳನ್ನು ಹಿಂಪಡೆಯುವ ಯಾವುದೇ ಸೂಚನೆಗಳು ಕಂಡು ಬರುತ್ತಿಲ್ಲ. ಇತ್ತ ಪ್ರತಿನಿತ್ಯ ಪ್ರತಿಭಟನಾನಿರತ ರೈತರು ಮೃತಪಡುತ್ತಿದ್ದರೂ ಸರ್ಕಾರ ಮಾತ್ರ ಮಣಿಯುತ್ತಿಲ್ಲ.

ದೆಹಲಿ-ಪಂಜಾಬ್​ ಗಡಿಭಾಗವಾದ ಟಿಕ್ರಿ ಗಡಿಯಲ್ಲಿ ಪ್ರತಿಭಟಿಸುತ್ತಿದ್ದ ಮತ್ತೊಬ್ಬ ರೈತ ಇಂದು ಹೃದಯಾಘಾತದಿಂದಾಗಿ ಸಾವನ್ನಪ್ಪಿದ್ದಾರೆ. ಮೃತ ರೈತರನ್ನು ಪಂಜಾಬ್​ನ ಮನ್ಸಾ ಜಿಲ್ಲೆಯ ಭೋಲಾ ಸಿಂಗ್ (45) ಎಂದು ಗುರುತಿಸಲಾಗಿದೆ. ಇವರ ಮೇಲೆ 3 ಲಕ್ಷ ರೂ. ಸಾಲ ಕೂಡ ಇತ್ತು ಎಂದು ಹೇಳಲಾಗಿದೆ.

ಇದನ್ನೂ ಓದಿ:ರೈತರ ಪ್ರತಿಭಟನೆಯಲ್ಲಿ ಹಿಂಸೆ ಸಂಚು: ಹೇಳಿಕೆ ಬದಲಾಯಿಸುತ್ತಿರುವ ಶಂಕಿತ ಆರೋಪಿ!

ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ಪಂಜಾಬ್​, ಹರಿಯಾಣ, ಉತ್ತರಪ್ರದೇಶ ರೈತರು ಗಡಿಭಾಗಗಳಲ್ಲಿ ಕಳೆದ 59 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

11 ಬಾರಿ ರೈತ ಮುಖಂಡರೊಂದಿಗೆ ಕೇಂದ್ರ ಸರ್ಕಾರ ಮಾತುಕತೆ ನಡೆಸಿದ್ದರೂ ರೈತರ ಬೇಡಿಕೆಗಳನ್ನು ಈಡೇರಿಸುವ ಭರವಸೆ ಸಿಕ್ಕಿಲ್ಲ. ಹೀಗಾಗಿ ಪಟ್ಟುಬಿಡದೇ ಅನ್ನದಾತರು ತಮ್ಮ ಧರಣಿ ಮುಂದುವರಿಸಿದ್ದಾರೆ.

ABOUT THE AUTHOR

...view details