ನವದೆಹಲಿ:ದೆಹಲಿ ಸಿಂಘು ಗಡಿಯಲ್ಲಿ ನಡೆಯುತ್ತಿರುವ ರೈತ ಹೋರಾಟದಲ್ಲಿ ಪಾಲ್ಗೊಂಡಿದ್ದ ಧಾಟ್ ಗ್ರಾಮದ ಯುವಕನೊಬ್ಬ ಸಾವನ್ನಪ್ಪಿದ್ದಾನೆ.
ದೆಹಲಿ ಸಿಂಘು ಗಡಿಯಲ್ಲಿ ಪ್ರತಿಭಟಿಸುತ್ತಿದ್ದ ಮತ್ತೊಬ್ಬ ರೈತ ಸಾವು - A young man from Dhat village, New Delhi
ದೆಹಲಿ ಸಿಂಘು ಗಡಿಯಲ್ಲಿ ನಡೆಯುತ್ತಿರುವ ರೈತ ಹೋರಾಟದಲ್ಲಿ ಪಾಲ್ಗೊಂಡಿದ್ದ ಧಾಟ್ ಗ್ರಾಮದ ಯುವಕನೊಬ್ಬ ಸಾವನ್ನಪ್ಪಿದ್ದಾನೆ. 14 ರಂದು ದೆಹಲಿಯ ಆಂದೋಲನದಲ್ಲಿ ಪಾಲ್ಗೊಳ್ಳಲು ಹೋಗಿದ್ದ ಆತ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.
ದೆಹಲಿ ಸಿಂಘು ಗಡಿಯಲ್ಲಿ ಪ್ರತಿಭಟಿಸುತ್ತಿದ್ದ ಮತ್ತೊಬ್ಬ ರೈತ ಸಾವು
ಸಾವನ್ನಪ್ಪಿದಾತನನ್ನು ಜಗ್ಜಿತ್ ಸಿಂಗ್ ಅಲಿಯಾಸ್ ಬಬ್ಬು ಎಂದು ಗುರುತಿಸಲಾಗಿದೆ. 14 ರಂದು ದೆಹಲಿಯ ಆಂದೋಲನದಲ್ಲಿ ಪಾಲ್ಗೊಳ್ಳಲು ಹೋಗಿದ್ದ ಆತ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.
ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ರೈತರು ಗಡಿಭಾಗಗಳಲ್ಲಿ ಕಳೆದ 56 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತ ಮುಖಂಡರೊಂದಿಗೆ ಸರ್ಕಾರ ನಡೆಸಿರುವ ಮಾತುಕತೆಗಳು ವಿಫಲವಾಗಿದ್ದು, ಚಳಿ, ಗಾಳಿ, ಬಿಸಿಲು ಎನ್ನದೇ ರೈತರು ಪಟ್ಟುಬಿದ್ದು ತಮ್ಮ ಹೋರಾಟ ಮುಂದುವರೆಸಿದ್ದಾರೆ.