ಕರ್ನಾಟಕ

karnataka

ETV Bharat / bharat

ಹಂತಕ ದುಬೆ ಮತ್ತೊಬ್ಬ ಬಂಟ ಕೋರ್ಟ್​ಗೆ ಶರಣು: ಪೊಲೀಸ್​ ಕಸ್ಟಡಿಗೆ ನೀಡಲು ಮನವಿ - ಎನ್​ಕೌಂಟರ್​

ಉತ್ತರ ಪ್ರದೇಶದಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದ ರೌಡಿಶೀಟರ್​ ವಿಕಾಸ್​ ದುಬೆಯ ಮತ್ತೊಬ್ಬ ಸಹಚರ ಕೋರ್ಟ್​ಗೆ ಶರಣಾಗಿದ್ದಾನೆ.

dsdsd
ಹಂತಕ ದುಬೆ ಮತ್ತೊಬ್ಬ ಬಂಟ ಕೋರ್ಟ್​ಗೆ ಶರಣು

By

Published : Aug 18, 2020, 8:59 AM IST

ಕಾನ್ಪುರ: ಉತ್ತರ ಪ್ರದೇಶದಲ್ಲಿ 8 ಪೊಲೀಸರ ಹತ್ಯೆಯಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಆರೋಪಿ ನ್ಯಾಯಾಲಯದ ಎದುರು ಶರಣಾಗಿದ್ದಾನೆ. ಕಾನ್ಪುರದ ದೇಹತ್‌ನಲ್ಲಿರುವ ಕೋರ್ಟ್​​ಗೆ ಆರೋಪಿ ಗೋವಿಂದ್ ಸೈನಿ ಶರಣಾಗಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಬ್ರಜೇಶ್ ಶ್ರೀವಾಸ್ತವ್​ ತಿಳಿಸಿದ್ದಾರೆ.

ಜುಲೈ- 2 ರ ರಾತ್ರಿ ಕಾನ್ಪುರದ ಬಿಕ್ರು ಗ್ರಾಮದಲ್ಲಿ ನಡೆದ ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದ ಗೋವಿಂದ್​ ಸೈನಿಗಾಗಿ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಹುಡುಕಾಡುತ್ತಿತ್ತು. ಸೈನಿ ಪರ ವಕೀಲರು ಶರಣಾಗತಿಗಾಗಿ ಕೋರ್ಟ್​​​​ಗೆ ಅರ್ಜಿ ಸಲ್ಲಿಸಿದ್ದಾರೆ. ಈ ನಡುವೆ ವಿಚಾರಣೆಗಾಗಿ ವಶಕ್ಕೆ ಪಡೆಯಲು ಕೋರ್ಟ್​ಗೆ ನಾವೂ ಕೂಡ ಮನವಿ ಮಾಡಿದ್ದೇವೆ ಎಂದು ಎಸ್​​​ಪಿ ಶ್ರೀವಾಸ್ತವ್​ ಹೇಳಿದ್ದಾರೆ.

ಈಗಾಗಲೆ ಉತ್ತರಪ್ರದೇಶ ಪೊಲೀಸರು ಪ್ರಕರಣದಲ್ಲಿ ಭಾಗಿಯಾದ ದಯಾ ಶಂಕರ್ ಅಗ್ನಿಹೋತ್ರಿ, ಶ್ಯಾಮು ಬಾಜ್ಪೈ, ಜಹಾನ್ ಯಾದವ್, ಶಶಿಕಾಂತ್, ಮೋನು ಮತ್ತು ಶಿವಂ ದುಬೆ ಸೇರಿದಂತೆ ವಿಕಾಸ್ ದುಬೆಯ ಹಲವು ಸಹಾಯಕರನ್ನ ಬಂಧಸಿ ಜೈಲಿಗೆ ಅಟ್ಟಿದ್ದಾರೆ.

ಇನ್ನು ಗೋವಿಂದ್ ಸೈನಿ ಸಹೋದರ ಗೋಪಾಲ್ ಸೈನಿ 20 ದಿನಗಳ ಹಿಂದೆ ಕಾನ್ಪುರ್ ದೇಹತ್‌ನ ವಿಶೇಷ ನ್ಯಾಯಾಲಯಕ್ಕೆ ಶರಣಾಗಿದ್ದ.

ABOUT THE AUTHOR

...view details