ಕರ್ನಾಟಕ

karnataka

ETV Bharat / bharat

ನನ್ನ ಫ್ಲಾಟ್​ ಇಎಂಐ ನಾನೇ ಕಟ್ಟುತ್ತಿದ್ದೇನೆ...  ಸಾಕ್ಷ್ಯ ಸಮೇತ ಸ್ಪಷ್ಟನೆ ಕೊಟ್ಟ ಅಂಕಿತಾ - ನಟಿ ಅಂಕಿತಾ ಲೋಕಂಡೆ

ಅಂಕಿತಾ ಲೋಖಂಡೆಯ 4.5 ಕೋಟಿ ರೂ ಮೌಲ್ಯದ ಮಾಲಾಡ್​ನ ಫ್ಲಾಟ್‌ಗಾಗಿ ಸುಶಾಂತ್ ಇಎಂಐ ಕಟ್ಟುತ್ತಿದ್ದರು ಎಂಬ ಸುದ್ದಿಗೆ ಅಂಕಿತಾ ದಾಖಲೆ ಸಮೇತ ಸ್ಪಷ್ಟನೆ ನೀಡಿದ್ದಾರೆ.

Ankita debunks reports claiming Sushant paid her EMI, shares bank statements
ನನ್ನ ಫ್ಲಾಟ್​ ಇಎಂಐ ಕಟ್ಟುತ್ತಿದ್ದದ್ದು ನಾನೆ.... ವರದಿ ತಳ್ಳಿಹಾಕಿದ ಅಂಕಿತಾ

By

Published : Aug 15, 2020, 3:56 PM IST

ಮುಂಬೈ:ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರು ಮಾಜಿ ಗೆಳತಿ, ನಟಿ ಅಂಕಿತಾ ಲೋಖಂಡೆ ಅವರ ಫ್ಲಾಟ್​​ನ ಇಎಂಐ ಕಟ್ಟುತ್ತಿದ್ದರು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಅಂಕಿತಾ ಅವರು ತಮ್ಮ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳ ಪ್ರತಿಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ತಾವೇ ಇಎಂಐ ಕಟ್ಟುತ್ತಿರುವುದಾಗಿ ಹೇಳಿದ್ದಾರೆ.

"ಇಲ್ಲಿ ನಾನು ಬ್ಯಾಂಕ್​ ಸಂಬಂಧ ಸಂಪೂರ್ಣ ಮಾಹಿತಿ ನೀಡುತ್ತಿದ್ದು, ಸಾಧ್ಯವಾದಷ್ಟು ಪಾರದರ್ಶಕವಾಗಿರುವ ಪ್ರಯತ್ನ ಮಾಡಿದ್ದೇನೆ. ಇದು ಫ್ಲಾಟ್‌ನ ನೋಂದಣಿ ಸಂಖ್ಯೆ ಮತ್ತು ದಿನಾಂಕ 01/01/19 ರಿಂದ 01/03/20 ರವರೆಗಿನ ನನ್ನ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು, ನನ್ನ ಖಾತೆಯಿಂದ ಮಾಸಿಕ ಆಧಾರದ ಮೇಲೆ ಇಎಂಐ ಕಡಿತಗೊಂಡಿರುವುದು ಸ್ಪಷ್ಟವಾಗಿ ತೋರುತ್ತದೆ. ಇದಕ್ಕಿಂತ ಹೆಚ್ಚಿನದನ್ನು ನಾನು ಹೇಳಬೇಕಾಗಿಲ್ಲ ಎಂದು ಅಂಕಿತಾ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಶನಿವಾರ ಬೆಳಿಗ್ಗೆ ಬರೆದುಕೊಂಡಿದ್ದಾರೆ. 2019ರ ಜನವರಿಯಿಂದ 2020ರ ಮಾರ್ಚ್ ವರೆಗಿನ ತನ್ನ ಬ್ಯಾಂಕ್ ಹೇಳಿಕೆಗಳ ಪ್ರತಿಗಳನ್ನು ಹಂಚಿಕೊಂಡಿದ್ದಾರೆ.

ಅಂಕಿತಾ ಲೋಖಂಡೆಯ 4.5 ಕೋಟಿ ರೂ. ಮೌಲ್ಯದ ಮಾಲಾಡ್​ನ ಫ್ಲಾಟ್‌ಗಾಗಿ ಸುಶಾಂತ್ ಇಎಂಐ ಕಟ್ಟುತ್ತಿದ್ದರು ಎಂಬ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ಅಂಕಿತಾ ಈ ಬಗ್ಗೆ ಸ್ಪಷ್ಟನೆಗೆ ಮುಂದಾಗಿದ್ದಾರೆ. ಈ ಮಾಹಿತಿ ಅವರಿಗೆ ಜಾರಿ ನಿರ್ದೇಶನಾಲಯದ (ಇಡಿ) ಮೂಲಗಳಿಂದ ದೊರಕಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ. ಶುಕ್ರವಾರ ಸಂಜೆ ವರದಿ ಹೊರಬಿದ್ದಿದ್ದು, ಮಧ್ಯರಾತ್ರಿಯ ಕೆಲವೇ ನಿಮಿಷಗಳಲ್ಲಿ ಅಂಕಿತಾ ಇದನ್ನು ನಿರಾಕರಿಸಿದ್ದಾರೆ.

ಏತನ್ಮಧ್ಯೆ, ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಇಡಿ, ಶುಕ್ರವಾರ ಸುಶಾಂತ್​ ಸೇವಕ ಸೇರಿದಂತೆ ಅವರ ವೈಯಕ್ತಿಕ ಸಿಬ್ಬಂದಿಯನ್ನು ಪ್ರಶ್ನಿಸಿದೆ. ಉನ್ನತ ಇಡಿ ಅಧಿಕಾರಿಗಳ ಪ್ರಕಾರ, ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ), 2002 ರ ಅಡಿಯಲ್ಲಿ ಪಂಕಜ್ ದುಬೆ, ರಜತ್ ಮೇವತಿ ಮತ್ತು ದೀಪೇಶ್ ಸಾವಂತ್ ಅವರ ಹೇಳಿಕೆಗಳನ್ನು ಸಂಸ್ಥೆ ದಾಖಲಿಸಿದೆ.

ABOUT THE AUTHOR

...view details