ಮುಂಬೈ:ಕಳೆದ ಕೆಲ ತಿಂಗಳಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರಿಲಯನ್ಸ್ ಕಮ್ಯುನಿಕೇಷನ್ ನಿರ್ದೇಶಕ ಸ್ಥಾನಕ್ಕೆ ಅನಿಲ್ ಧೀರೂಭಾಯಿ ಅಂಬಾನಿ ಕೊನೆಗೂ ರಾಜೀನಾಮೆ ನೀಡಿದ್ದು, ಹುದ್ದೆಯಿಂದ ಹೊರ ಬಂದಿದ್ದಾರೆ.
ಆರ್ಥಿಕ ಸಂಕಷ್ಟ: ರಿಲಯನ್ಸ್ ಕಮ್ಯುನಿಕೇಷನ್ಗೆ ಅಂಬಾನಿ ದಿಢೀರ್ ರಾಜೀನಾಮೆ! - ಅನಿಲ್ ಧೀರೂಭಾಯಿ ಅಂಬಾನಿ
ಆರ್ಥಿಕ ಸಂಕಷ್ಟಕ್ಕೊಳಗಾಗಿ ನಷ್ಟ ಅನುಭವಿಸುತ್ತಿದ್ದ ರಿಲಯನ್ಸ್ ಕಮ್ಯುನಿಕೇಷನ್ ನಿರ್ದೇಶಕ ಸ್ಥಾನಕ್ಕೆ ಅನಿಲ್ ಧೀರೂಭಾಯಿ ಅಂಬಾನಿ ದಿಢೀರ್ ರಾಜೀನಾಮೆ ನೀಡಿದ್ದಾರೆ.
ರಿಲಯನ್ಸ್ ಕಮ್ಯುನಿಕೇಷನ್ಗೆ ಅಂಬಾನಿ ದಿಢೀರ್ ರಾಜೀನಾಮೆ
2019 - 2020ರ ಎರಡನೇ ತ್ರೈಮಾಸಿಕ ವರದಿಯಲ್ಲೂ ಬರೋಬ್ಬರಿ ರಿಲಯನ್ಸ್ ಕಮ್ಯುನಿಕೇಷ್ ಬರೋಬ್ಬರಿ 30,158 ಒಟ್ಟು ನಷ್ಟದ ಮಾಹಿತಿ ನೀಡಿದೆ. ಹೀಗಾಗಿ ಸಂಕಷ್ಟಕ್ಕೊಳಗಾಗಿ ಮಹತ್ವದ ಬೆಳವಣಿಗೆಯಲ್ಲಿ ರಿಲಯನ್ಸ್ ಕಮ್ಯುನಿಕೇಷನ್ ನಿರ್ದೇಶಕರ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಇವರೊಂದಿಗೆ ನಿರ್ದೇಶಕರಾಗಿದ್ದ ಛಾಯಾ ವಿರಾನಿ, ರಾನಾ ಕರಾನಿ, ಮಂಜರಿ ಕಾಕೆರ್ ಮತ್ತು ಸುರೇಶ್ ರಂಗಾಚಾರ್ ಕೂಡ ರಾಜೀನಾಮೆ ನೀಡಿದ್ದಾರೆ. ಈ ಕುರಿತಂತೆ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.