ಕರ್ನಾಟಕ

karnataka

ETV Bharat / bharat

ತಿಹಾರ್​ ಜೈಲಿನ ಹೈರಿಸ್ಕ್​ ಸೆಲ್​ಗಳಲ್ಲಿ ಸೆಲ್​ಫೋನ್​ಗಳು ಪತ್ತೆ - ತಿಹಾರ್​ ಜೈಲಿನ ಸೆಲ್​ಗಳಲ್ಲಿ ಸೆಲ್​ಫೋನ್​ಗಳು ಪತ್ತೆ

ತಿಹಾರ್ ಜೈಲು ಆಡಳಿತವು ಹೆಚ್ಚಿನ ಅಪಾಯ ಇರುವ ಸೆಲ್​ಗಳಲ್ಲಿ ದಾಳಿ ನಡೆಸಿ ಆಂಡ್ರಾಯ್ಡ್ ಸೆಲ್‌ಫೋನ್‌ಗಳ ಜೊತೆಗೆ ಚಾರ್ಜರ್‌ಗಳು ಮತ್ತು ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದೆ.

Android phones found in Tihar jail
ತಿಹಾರ್​ ಜೈಲಿನ ಹೈರಿಸ್ಕ್​ ಸೆಲ್​ಗಳಲ್ಲಿ ಸೆಲ್​ಫೋನ್​ಗಳು ಪತ್ತೆ

By

Published : Jun 29, 2020, 7:53 PM IST

ನವದೆಹಲಿ:ಹೆಚ್ಚಿನ ಅಪಾಯ ಇರುವಂತ ಸೆಲ್​ಗಳಲ್ಲಿ ತಿಹಾರ್ ಜೈಲು ಆಡಳಿತವು ದಾಳಿ ನಡೆಸಿದ್ದು, ಸುಮಾರು ಐದು ಆಂಡ್ರಾಯ್ಡ್ ಸೆಲ್‌ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸದ್ಯ ಸೆಲ್‌ಫೋನ್‌ಗಳು ಜೈಲಿನ ಆವರಣಕ್ಕೆ ಹೇಗೆ ಬಂದವು ಮತ್ತು ಅದನ್ನು ಯಾರು ಬಳಸುತ್ತಿದ್ದರು ಎಂಬುದು ಸ್ಪಷ್ಟವಾಗಿಲ್ಲ. ಸೆಲ್​ನಲ್ಲಿದ್ದ ಚಾರ್ಜರ್‌ಗಳು ಮತ್ತು ಸಿಮ್ ಕಾರ್ಡ್‌ಗಳನ್ನೂ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಮೂಲಗಳ ಪ್ರಕಾರ, ಜೈಲಿನಲ್ಲಿ ನಿಯೋಜಿಸಲಾಗಿರುವ ಭದ್ರತಾ ಸಿಬ್ಬಂದಿ ಫೋನ್‌ಗಳನ್ನು ಕಳ್ಳಸಾಗಣೆ ಮಾಡುವುದರಲ್ಲಿ ಭಾಗಿಯಾಗಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಹೆಚ್ಚನ ತನಿಖೆ ಪ್ರಗತಿಯಲ್ಲಿದೆ.

ABOUT THE AUTHOR

...view details