ವಿಜಯವಾಡ (ಆಂಧ್ರಪ್ರದೇಶ) : ಮಸಾಲೆ ಪದಾರ್ಥಗಳನ್ನು ಬಳಸಿ 54.67 ಚದರ್ ಮೀಟರ್ ಅಡಿಯ ಚಿತ್ರ ಬಿಡಿಸುವ ಮೂಲಕ ಎಸ್‌ಆರ್‌ಎಂ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಗಿನ್ನೆಸ್ ವಿಶ್ವ ದಾಖಲೆ ಮಾಡಿದ್ದಾಳೆ.
ಮಸಾಲೆ ಪದಾರ್ಥಗಳಿಂದ ಚಿತ್ರ ಬಿಡಿಸಿ ಗಿನ್ನೆಸ್ ದಾಖಲೆ ಮಾಡಿದ ಆಂಧ್ರ ವಿದ್ಯಾರ್ಥಿನಿ - ಗಿನ್ನೆಸ್ ದಾಖಲೆ ಮಾಡಿದ ಆಂಧ್ರ ವಿದ್ಯಾರ್ಥಿನಿ
ಆಂಧ್ರ ಪ್ರದೇಶದ ಎಸ್ಎಂಆರ್ ವಿವಿಯ ವಿದ್ಯಾರ್ಥಿನಿಯೊಬ್ಬಳು ಅರಿಶಿನ ಮತ್ತು ಕುಂಕುಮ ಬಳಸಿ 4 ಗಂಟೆಗಳ ಅವಧಿಯಲ್ಲಿ ಚಿಕ್ಕ ಹುಡುಗಿಯೊಬ್ಬಳು ಸೂರ್ಯೋದಯವನ್ನು ನೋಡುತ್ತಿರುವ ಚಿತ್ರವನ್ನು ಬಿಡಿಸಿದ್ದು, ಈ ಚಿತ್ರ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ಸ್ಥಾನ ಪಡೆದಿದೆ.
ಎಸ್ಎಂಆರ್ ವಿವಿಯ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಶ್ರೇಯಾ ಟಟಿನೇನಿ ಈ ಸಾಧನೆ ಮಾಡಿದ ಯುವತಿ. ಅರಿಶಿನ ಮತ್ತು ಕುಂಕುಮ ಬಳಸಿ 4 ಗಂಟೆಗಳ ಅವಧಿಯಲ್ಲಿ ಚಿಕ್ಕ ಹುಡುಗಿಯೊಬ್ಬಳು ಸೂರ್ಯೋದಯವನ್ನು ನೋಡುತ್ತಿರುವ ಚಿತ್ರವನ್ನು ಶ್ರೇಯಾ ಬಿಡಿಸಿದ್ದು, ಈ ಚಿತ್ರ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ಸ್ಥಾನ ಪಡೆದಿದೆ. ಮೇ 13 ರಂದು ಗಿನ್ನೆಸ್ ಪ್ರಶಸ್ತಿ ಸಮಿತಿಯಿಂದ ಇ-ಮೈಲ್ ಬಂದಾಗ ಶ್ರೇಯಾ ಬಿಡಿಸಿರುವ ಚಿತ್ರ ವಿಶ್ವ ದಾಖಲೆ ಮಾಡಿರುವುದು ಗೊತ್ತಾಗಿದೆ.
ಈ ಬಗ್ಗೆ ಮಾತನಾಡಿದ ಸಾಧಕಿ ಶ್ರೇಯಾ, ಮಸಾಲೆ ಪದಾರ್ಥಗಳಿಂದ ದೊಡ್ಡ ಚಿತ್ರಗಳನ್ನು ಬಿಡಿಸುವ ವಿಡಿಯೋಗಳನ್ನು ನೋಡುತ್ತಿದ್ದೆ. ಅದೇ ರೀತಿ ನಾನು ಕೂಡ ಅರಿಶಿನ ಮತ್ತು ಕುಂಕುಮ ಬಳಸಿ ಚಿತ್ರ ಬಿಡಿಸಲು ನಿರ್ಧರಿಸಿದೆ. ವಿಭಿನ್ನವಾಗಿ ಯೋಚಿಸುವ ಸಾಮರ್ಥ್ಯ ನನಗೆ ಇಲ್ಲಿ ಸಹಾಯ ಮಾಡಿದೆ. ಗಿನ್ನೆಸ್ ದಾಖಲೆಗಳಲ್ಲಿ ಸ್ಥಾನ ಪಡೆಯುವುದು ಅಷ್ಟು ಸುಲಭವಲ್ಲ, ಸಾಕಷ್ಟು ಕಠಿಣ ಪರಿಶ್ರಮದ ಅಗತ್ಯವಿದೆ. ಈ ಸಾಧನೆಯಿಂದ ನಾನು ಎಲ್ಲವನ್ನೂ ಗೆಲ್ಲಬಲ್ಲೆ ಎಂಬ ವಿಶ್ವಾಸ ಬಂದಿದೆ. ಮುಂದಿನ ದಿನಗಳಲ್ಲಿ, ಯುಎಸ್ನಲ್ಲಿ ಎಂಬಿಎ ವ್ಯಾಸಂಗ ಮಾಡಲು ಯೋಚಿಸಿದ್ದೇನೆ ಎಂದರು.