ಏಲೂರು (ಆಂಧ್ರಪ್ರದೇಶ):ಪೊಲೀಸ್ ಠಾಣೆಯಲ್ಲಿ ಥಳಿಸಲ್ಪಟ್ಟು, ಕೇಶ ಮುಂಡನ ಮಾಡಿಸಿಕೊಂಡು ಅವಮಾನಕ್ಕೆ ಒಳಗಾಗಿದ್ದ ಪರಿಶಿಷ್ಟ ಜಾತಿಯ ಯುವಕನೋರ್ವ ತನಗೆ ನ್ಯಾಯ ಸಿಗಲಿಲ್ಲ ಎಂದು ಆರೋಪಿಸಿ ರಾಷ್ಟ್ರಪತಿಗೆ ಪತ್ರ ಬರೆದು ನಕ್ಸಲಿಸಂ ಸೇರಲು ಅನುಮತಿ ಕೇಳಿರುವ ಅಪರೂಪದ ಪ್ರಸಂಗ ಆಂಧ್ರ ಪ್ರದೇಶ ಏಲೂರು ಎಂಬಲ್ಲಿ ನಡೆದಿದೆ.
ರಾಜಮಂಡ್ರಿಯ ವೇಡುಲ್ಲಪಲ್ಲೆ ಎಂಬ ಗ್ರಾಮದ ವರಪ್ರಸಾದ್, ರಾಷ್ಟ್ರಪತಿಗೆ ಪತ್ರ ಬರೆದ ಯುವಕನಾಗಿದ್ದು, ವೈಎಸ್ಆರ್ಸಿಪಿ ನಾಯಕ ಮರಳು ಲಾರಿಗಳನ್ನು ಮುನಿ ಕುಡಲಿ ಎಂಬ ಪ್ರದೇಶದಲ್ಲಿ ತಡೆದಿದ್ದನು. ಇದಾದ ನಂತರ ಆತನನ್ನು ಜುಲೈ 20ರಂದು ವಿಚಾರಣೆ ಹೆಸರಲ್ಲಿ ಸೀತಾನಗರಂ ಪೊಲೀಸ್ ಠಾಣೆಗೆ ಕರೆದು ಹೇಳಿಕೆ ಹಲ್ಲೆ ನಡೆಸಿ, ತಲೆ ಹಾಗೂ ಗಡ್ಡವನ್ನು ಬೋಳಿಸಿ ಕಳುಹಿಸಲಾಗಿತ್ತು.