ಶ್ರೀಕಾಕುಲಂ (ಆಂಧ್ರಪ್ರದೇಶ):ರಾಜಂ ಪಟ್ಟಣದಲ್ಲಿ ಕೊರೊನಾ ವೈರಸ್ ಕುರಿತು ವಿಶೇಷವಾಗಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಯಿತು. ಸ್ಥಳೀಯ ಪೊಲೀಸರು ಸ್ಕೌಟ್ಸ್ ಆ್ಯಂಡ್ ಗೈಡ್ಸ್ ವಿದ್ಯಾರ್ಥಿಗಳ ಸಹಾಯದೊಂದಿಗೆ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ವಿದ್ಯಾರ್ಥಿಗಳಿಗೆ ಯಮರಾಜ ಹಾಗೂ ಕಿಂಕರರು ಹಾಗೂ ಕೊರೊನಾ ವೇಷ ಹಾಕಿಸಿ ವಿಶೇಷ ಪ್ರದರ್ಶನ ನೀಡುವ ಮೂಲಕ ಮಾರ್ಗದರ್ಶನ ನೀಡಿದ್ದಾರೆ.
ಬೀದಿಗಿಳಿದ 'ಯಮರಾಜ': ರಸ್ತೆಗಿಳಿದ್ರೇ ಹುಷಾರ್..! - god of death amid lockdown
ಸ್ಕೌಟ್ಸ್ ಆ್ಯಂಡ್ ಗೈಡ್ಸ್ ವಿದ್ಯಾರ್ಥಿಗಳ ಸಹಾಯದೊಂದಿಗೆ ರಾಜಂ ಪಟ್ಟಣದಲ್ಲಿ ಜನರಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸಲಾಗಿದೆ.
Rajam administration amid lockdown
ವೇಷ ಧರಿಸಿದ ವಿದ್ಯಾರ್ಥಿಗಳು ಬೀದಿಗೆ ಬಂದು ಜನರನ್ನು ಮನೆಯೊಳಗೆ ಇರಬೇಕು. ಹಾಗೂ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ಎಚ್ಚರಿಸಿದರು. ಎರಡು ದಿನಗಳ ಹಿಂದೆ ಜಿಲ್ಲೆಯ ನಾಲ್ಕು ಜನರಿಗೆ ಮಾರಣಾಂತಿಕ ಸೋಂಕು ತಗುಲಿದ ನಂತರ, ಈ ಅಭಿಯಾನವನ್ನು ನಡೆಸಲಾಯಿತು. ಇದಕ್ಕೂ ಮುನ್ನ ಶ್ರೀಕಾಕುಲಂ ಜಿಲ್ಲೆಯನ್ನು ಹಸಿರು ವಲಯವೆಂದು ಪರಿಗಣಿಸಲಾಗಿತ್ತು.