ಕರ್ನೂಲ್: ರೈತ ಮಹಿಳೆಗೆ ತನ್ನದೇ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ವಜ್ರದ ಕಲ್ಲೊಂದು ಸಿಕ್ಕಿದೆ. ಆದ್ರೆ ಅದು ಸಿಕ್ಕ ದಿನದ ಮಧ್ಯೆರಾತ್ರಿಯೇ ಮಾರಾಟಾವಾಗಿದ್ದು, ಅಚ್ಚರಿಗೆ ಕಾರಣವಾಗಿದೆ.
ಇಲ್ಲಿನ ಪಗಡಿರಾಯ ಗ್ರಾಮದ ರೈತ ಮಹಿಳೆಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ವಜ್ರದ ಕಲ್ಲೊಂದು ಸಿಕ್ಕಿತ್ತು. ಅದನ್ನು ಪರೀಕ್ಷಿಸಿ ನೋಡಿದಾಗ ಆರು ಕ್ಯಾರೆಟ್ ವಜ್ರದ ಕಲ್ಲು ಎಂಬುದು ತಿಳಿದಿದೆ.
ಇನ್ನು ಈ ವಜ್ರದ ಕಲ್ಲನ್ನು ಅನಂತಪುರಂ ಜಿಲ್ಲೆಯ ಗುತ್ತಿ ಪಟ್ಟಣ ವ್ಯಾಪಾರಸ್ಥನೊಬ್ಬ ಆ ರೈತ ಮಹಿಳೆಗೆ ನಾಲ್ಕು ಲಕ್ಷ ನಗದು ಮತ್ತು ಮೂವತ್ತು ಗ್ರಾಂ ಬಂಗಾರವನ್ನು ನೀಡಿ ಖರೀದಿಸಿದ್ದಾರೆ ಎನ್ನಲಾಗ್ತಿದೆ.
ಇದೇ ವರ್ಷ ಬೊಳ್ಲವಾನಿಪಲ್ಲಿಯಲ್ಲಿ ಹೊಲದ ಮಾಲೀಕನಿಗೆ ವಜ್ರದ ಕಲ್ಲು ಸಿಕ್ಕಿತ್ತು. ಆ ಕಲ್ಲು ಸುಮಾರು 13 ಲಕ್ಷ ರೂ.ಗೆ ಮಾರಾಟವಾಗಿತ್ತು. ಅನಂತರ ಈ ವಜ್ರದ ಕಲ್ಲು ಅತ್ಯಂತ ದೊಡ್ಡ ಮೊತ್ತಕ್ಕೆ ಮಾರಾಟ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ.