ಕರ್ನಾಟಕ

karnataka

ETV Bharat / bharat

ಶ್ರೀಕಾಳಹಸ್ತಿ ದೇವಸ್ಥಾನದ ಅರ್ಚಕರಿಗೂ ಬಂತು ಕೊರೊನಾ: ಹೆಚ್ಚಿದ ಆತಂಕ - ಶ್ರೀಕಾಳಹಸ್ತಿ ದೇವಸ್ಥಾನ

ದೇವಾಲಯದ ಪುರೋಹಿತರು, ಕಾರ್ಮಿಕರು ಮತ್ತು ಇತರ ಸಿಬ್ಬಂದಿ ಸೇರಿದಂತೆ 71 ಜನರ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ. ನಿನ್ನೆ ಸಂಜೆ 15 ಮಾದರಿಗಳ ಫಲಿತಾಂಶಗಳು ಬಂದಿವೆ. ಅವುಗಳಲ್ಲಿ, ಒಬ್ಬ ಅರ್ಚಕನ ವರದಿ ಪಾಸಿಟಿವ್ ಎಂದು ತಿಳಿದು ಬಂದಿದೆ.

ಕೋವಿಡ್​-19 ಪಾಸಿಟಿವ್
ಕೋವಿಡ್​-19 ಪಾಸಿಟಿವ್

By

Published : Jun 10, 2020, 9:29 AM IST

ಚಿತ್ತೂರು (ಆಂಧ್ರಪ್ರದೇಶ): ಶ್ರೀಕಾಳಹಸ್ತಿ ದೇವಸ್ಥಾನದ ಅರ್ಚಕರೊಬ್ಬರಿಗೆ ಕೋವಿಡ್​-19 ಪಾಸಿಟಿವ್​​ ದೃಢಪಟ್ಟಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಇಂದು ನಡೆಯಬೇಕಿದ್ದ ಎಲ್ಲ ಕಾರ್ಯಗಳನ್ನು ಮುಂದೂಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ದೇವಾಲಯದ ಪುರೋಹಿತರು, ಕಾರ್ಮಿಕರು ಮತ್ತು ಇತರ ಸಿಬ್ಬಂದಿ ಸೇರಿದಂತೆ 71 ಜನರ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ. ನಿನ್ನೆ ಸಂಜೆ 15 ಮಾದರಿಗಳ ಫಲಿತಾಂಶಗಳು ಬಂದಿವೆ. ಅವುಗಳಲ್ಲಿ, ಒಬ್ಬ ಅರ್ಚಕನ ವರದಿಯು ಪಾಸಿಟಿವ್ ಎಂದು ತಿಳಿದು ಬಂದಿದೆ. ಆದ್ದರಿಂದ ನಾವು ತಾತ್ಕಾಲಿಕವಾಗಿ ನಮ್ಮ ಕಾರ್ಯಕ್ರಮಗಳನ್ನು ಮುಂದೂಡುತ್ತಿದ್ದೇವೆ "ಎಂದು ಶ್ರೀಕಾಳಹಸ್ತಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ರೆಡ್ಡಿ ಹೇಳಿದರು.

"ನಾವು ಇದನ್ನು ಉನ್ನತ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಮುಂದಿನ ಆದೇಶದವರೆಗೆ ಭಕ್ತರಿಗಾಗಿ ದೇವಾಲಯವನ್ನು ಮುಚ್ಚುತ್ತಿದ್ದೇವೆ. ಭಕ್ತರು ಇದಕ್ಕೆ ಸಹಕಾರ ನೀಡಬೇಕು ಎಂದು ಚಂದ್ರಶೇಖರ್ ರೆಡ್ಡಿ ಹೇಳಿದರು.

ABOUT THE AUTHOR

...view details