ಕರ್ನಾಟಕ

karnataka

ETV Bharat / bharat

ಟಿಡಿಪಿ ವಿರುದ್ಧ ರೋಜಾ ವಾಗ್ದಾಳಿ.... ಭರ್ಜರಿ ತಿರುಗೇಟು

ಲಾಕ್‌ಡೌನ್ ಮಧ್ಯೆ ಪುಟ್ಟೂರಿನ ಸುಂದರಯ್ಯ ನಗರದಲ್ಲಿ ಬೋರ್‌ ಬಾವಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದನ್ನು ಟೀಕಿಸಿದ ಟಿಡಿಪಿ ನಾಯಕರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿರುವ ವೈಎಸ್‌ಆರ್‌ಸಿಪಿ ಶಾಸಕಿ ಆರ್‌ಕೆ ರೋಜಾ, ಟಿಡಿಪಿ ಅನಗತ್ಯವಾಗಿ ಇದನ್ನು ಸಮಸ್ಯೆಯನ್ನಾಗಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಟಿಡಿಪಿ ವಿರುದ್ಧ ರೋಜಾ ವಾಗ್ದಾಳಿ
ಟಿಡಿಪಿ ವಿರುದ್ಧ ರೋಜಾ ವಾಗ್ದಾಳಿ

By

Published : Apr 22, 2020, 5:32 PM IST

ಚಿತ್ತೂರು (ಆಂಧ್ರಪ್ರದೇಶ): ಪುಟ್ಟೂರು ಪಟ್ಟಣದ ನಿವಾಸಿಗಳಿಗೆ ತೆಲುಗು ದೇಶಂ ಪಕ್ಷ (ಟಿಡಿಪಿ) ಸಹಾಯ ಮಾಡಿಲ್ಲ ಎಂದು ವೈಎಸ್ಆರ್ ಕಾಂಗ್ರೆಸ್ ಪಕ್ಷದ ಶಾಸಕಿ ಆರ್.ಕೆ.ರೋಜಾ ಟೀಕಿಸಿದ್ದಾರೆ.

ಪುತ್ತೂರು ಪಟ್ಟಣದ ಶಾಸಕರು ಟಿಡಿಪಿ ನಾಯಕರಾಗಿದ್ದರೂ, ಇಲ್ಲಿನ ಜನರು ಹಲವಾರು ವರ್ಷಗಳಿಂದ ನೀರು ಮತ್ತು ವಿದ್ಯುತ್ ಕೊರತೆಯಿಂದ ಬಳಲುತ್ತಿದ್ದಾರೆ. ವೈಎಸ್ಆರ್​ಸಿಪಿ ಸರ್ಕಾರ ಈ ಜನರಿಗೆ ಸಹಾಯ ಮಾಡಲು ಮುಂದಾಗಿದೆ ಎಂದು ರೋಜಾ ಹೇಳಿದರು.

ಚಿತ್ತೂರು ಜಿಲ್ಲೆಯ ಪುಟ್ಟೂರು ಪಟ್ಟಣದ ಸುಂದರಯ್ಯ ನಗರದಲ್ಲಿ ಬೋರ್‌ ಬಾವಿಯ ಉದ್ಘಾಟನೆಗೆ ಸ್ಥಳೀಯರು ರೋಜಾ ಅವರನ್ನು ಆಹ್ವಾನಿಸಿದ್ದರು. ಹೂವಿನ ಮಳೆಗೈಯ್ಯುವ ಮೂಲಕ ಅವರಿಗೆ ಭರ್ಜರಿ ಸ್ವಾಗತ ನೀಡಿದರು. ಇದಕ್ಕೆ ಶಾಸಕಿ ರೋಜಾ ಇಂತಹ ಭರ್ಜರಿ ಸ್ವಾಗತವನ್ನು ನಿರೀಕ್ಷಿಸಿರಲಿಲ್ಲ. ಜನರ ಭಾವನೆಗಳನ್ನು ನೋಯಿಸಲು ನಾನು ಬಯಸುವುದಿಲ್ಲ. ಅದಕ್ಕಾಗಿ ನಾನು ಇವರ ಆಹ್ವಾನ ಒಪ್ಪಿಕೊಂಡೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ವ್ಯಕ್ತಿಯು ಸಾಮಾಜಿಕ ಅಂತರ ಕಾಪಾಡಿಕೊಂಡು ಮತ್ತು ಮಾಸ್ಕ್​ ಧರಿಸಿದ್ದರು. ಟಿಡಿಪಿ ನಾಯಕರು ಅನಗತ್ಯವಾಗಿ ಇದನ್ನು ಸಮಸ್ಯೆಯನ್ನಾಗಿ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details