ವಿಜಯನಗ್ರಾಮ್(ಆಂಧ್ರಪ್ರದೇಶ): ಆಂಧ್ರಪ್ರದೇಶದಿಂದ ಒಡಿಶಾಗೆ ಸಾಗಾಣಿಕೆ ಮಾಡಲಾಗ್ತಿದ್ದ ಬರೋಬ್ಬರಿ 675 ಕೆಜಿ ಗಾಂಜಾ ವಶಪಡಿಸಿಕೊಳ್ಳುವಲ್ಲಿ ಆಂಧ್ರಪ್ರದೇಶ ಪೊಲೀಸರು ಯಶಸ್ವಿಯಾಗಿದ್ದಾರೆ.
ಬರೋಬ್ಬರಿ 675 ಕೆ.ಜಿ ಗಾಂಜಾ ವಶಪಡಿಸಿಕೊಂಡ ಆಂಧ್ರ ಪೊಲೀಸರು! - ಆಂಧ್ರಪ್ರದೇಶ ಪೊಲೀಸರು
ವಿವಿಧ ರಾಜ್ಯಗಳಲ್ಲಿ ಅಕ್ರಮ ಗಾಂಜಾ ಸಾಗಾಣಿಕೆ ಪ್ರಕರಣ ಬೆಳಕಿಗೆ ಬರುತ್ತಿದ್ದು, ಸದ್ಯ ಆಂಧ್ರಪ್ರದೇಶದಲ್ಲಿ ಪೊಲೀಸರು ಬರೋಬ್ಬರಿ 675 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
Andhra Pradesh police
ಲಾರಿಯಲ್ಲಿ ಇಷ್ಟೊಂದು ಗಾಂಜಾ ಸಾಗಾಟ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಸರ್ಕಲ್ ಇನ್ಸ್ಪೆಕ್ಟರ್ ಲಕ್ಷ್ಮಣ ರಾವ್, ಮಳೆಯಿಂದಾಗಿ ರಸ್ತೆ ಬಂದ್ ಆಗಿತ್ತು. ಈ ವೇಳೆ ಟ್ರಾಫಿಕ್ ಜಾಮ್ ಕ್ಲೀಯರ್ ಮಾಡಲು ಮುಂದಾಗಿದ್ದಾಗ ರಸ್ತೆಯಲ್ಲಿ ನಿಂತುಕೊಂಡಿದ್ದ ಲಾರಿ ಪರಿಶೀಲನೆ ನಡೆಸಿದಾಗ ಇಷ್ಟೊಂದು ಗಾಂಜಾ ಸಿಕ್ಕಿದೆ ಎಂದಿದ್ದಾರೆ.
ಲಾರಿಯಲ್ಲಿ ಪಶ್ಚಿಮ ಬಂಗಾಳದ ನಂಬರ್ ಪ್ಲೇಟ್ ಲಭ್ಯವಾಗಿದ್ದು, ತನಿಖೆ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.