ಗುಂಟೂರು( ಆಂಧ್ರ ಪ್ರದೇಶ): ಬಾಡಿಗೆ ಪಾವತಿ ಮಾಡಲು ವಿಫಲಗೊಂಡಿರುವ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದಿದೆ.
ಬಾಡಿಗೆ ಪಾವತಿಸದಿದ್ದರೆ ಕೊಲೆ ಬೆದರಿಕೆ... ಹೆದರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ! - ಬಾಡಿಗೆ ಪಾವತಿ ಮಾಡಲು ವಿಫಲ
ಬಾಡಿಗೆ ಪಾವತಿ ಮಾಡದಿದ್ದರೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರಿಂದ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದಿದೆ.
30 ವರ್ಷದ ವ್ಯಕ್ತಿಯೋರ್ವ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಚೈನೀಸ್ ಫುಡ್ ಶಾಪ್ ಇಟ್ಟುಕೊಂಡಿದ್ದನು. ಆದರೆ ಸದ್ಯ ಲಾಕ್ಡೌನ್ ಇರುವ ಕಾರಣ ಆತನಿಗೆ ಯಾವುದೇ ರೀತಿಯ ವ್ಯಾಪಾರ ಆಗಿರಲಿಲ್ಲ. ಇದರ ಮಧ್ಯೆ ಮನೆ ಮಾಲೀಕ ಮೇಲಿಂದ ಮೇಲೆ ಬಾಡಿಗೆ ಪಾವತಿಸುವಂತೆ ಆತನ ಮೇಲೆ ಒತ್ತಡ ಹಾಕಿದ್ದು, ಕೊಲೆ ಮಾಡುವ ಬೆದರಿಕೆ ಸಹ ಹಾಕಿದ್ದನು. ಇದರಿಂದ ಭಯಗೊಂಡು ಆತ ಮನೆಯಲ್ಲಿ ಯಾರು ಇಲ್ಲದ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮೃತ ವ್ಯಕ್ತಿಯ ಬಳಿ ಸೊಸೈಡ್ ನೋಟ್ ಲಭ್ಯವಾಗಿದ್ದು, ಬಾಡಿಗೆದಾರನ ಕಿರುಕುಳದಿಂದಲೇ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಅದರಲ್ಲಿ ಹೇಳಿದ್ದಾನೆ. ಪೊಲೀಸ್ ದೂರು ನೀಡಿರುವ ಈತನ ಹೆಂಡತಿ ಕೂಡ ಬಾಡಿಗೆದಾರ ಮೇಲಿಂದ ಮೇಲೆ ಕಿರುಕುಳ ನೀಡಿದ್ದರಿಂದಲೇ ಆತ ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಹೇಳಿದ್ದಾಳೆ. ಇದಕ್ಕೆ ಸಂಬಂಧಿಸಿದಂತೆ ಆತನ ವಿರುದ್ಧ ಸೆಕ್ಷನ್ 306 ಅಡಿ ಪ್ರಕರಣ ದಾಖಲು ಮಾಡಿಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.