ವಿಶಾಖಪಟ್ಟಣಂ:ಆಸ್ತಿ ವಿಚಾರದಲ್ಲಿ ವಾಗ್ವಾದ ನಡೆದು ವ್ಯಕ್ತಿಯೊಬ್ಬ ತನ್ನ 40 ವರ್ಷದ ಮಗನನ್ನು ಸುತ್ತಿಗೆಯಿಂದ ಹೊಡೆದು ಕೊಂದ ಘಟನೆ ನಗರದ ಪೆಂಡೂರ್ತಿ ಪೊಲೀಸ್ ಠಾಣೆ ವ್ಯಾಪ್ತಿಯ ಚಿನಮುಶಿಡಿವಾಡ ಬಳಿಯ ಸತ್ಯನಗರದಲ್ಲಿ ನಡೆದಿದೆ.
ವಿಡಿಯೋ: ಮಗನನ್ನು ಸುತ್ತಿಗೆಯಿಂದ ಹೊಡೆದು ಕೊಂದ ತಂದೆ! - ಸುತ್ತಿಗೆಯಿಂದ ಹೊಡೆದು ವ್ಯಕ್ತಿ ಕೊಲೆ
ಆಸ್ತಿ ವಿಚಾರಕ್ಕೆ ಜಗಳ ನಡೆದು ತಂದೆಯೇ ಮಗನನ್ನು ಸುತ್ತಿಗೆಯಿಂದ ಹೊಡೆದು ಭೀಕರವಾಗಿ ಕೊಂದಿರುವ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ.
ಮಗನನ್ನು ಸುತ್ತಿಗೆಯಿಂದ ಹೊಡೆದು ಕೊಂದ ತಂದೆ
ತಂದೆ ವೀರರಾಜು ಮಗ ಜಲರಾಜುನನ್ನು ಕೊಲೆ ಮಾಡಿದ್ದಾನೆ. ಮುಂಬೈನಲ್ಲಿ ಸಿಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಜಲರಾಜು ಕೆಲ ದಿನಗಳ ಹಿಂದೆ ಮನೆಗೆ ಬಂದಿದ್ದ. ಈ ವೇಳೆ ಆಸ್ತಿ ವಿಚಾರದಲ್ಲಿ ಜಗಳ ನಡೆದು ತಂದೆ ಮಗನನ್ನು ಸುತ್ತಿಗೆಯಿಂದ ಹೊಡೆದು ಕೊಂದಿದ್ದಾನೆ.
ಘಟನೆ ಬಳಿಕ ಆರೋಪಿ ವೀರರಾಜು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಐಪಿಸಿ ಸೆಕ್ಷನ್ 302ರಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Last Updated : Aug 14, 2020, 3:24 PM IST