ಕರ್ನಾಟಕ

karnataka

ETV Bharat / bharat

ದೆಹಲಿಯಲ್ಲಿ ನಾಯ್ಡು- ಕೇಜ್ರಿವಾಲ್​ ಭೇಟಿ... ಏನೆಲ್ಲಾ ಚರ್ಚೆ? - undefined

ಆಂಧ್ರ ಪ್ರದೇಶ ಸಿಎಂ ಎನ್​. ಚಂದ್ರಬಾಬು ನಾಯ್ಡು ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್​​ ಕೇಜ್ರಿವಾಲ್​ ದೆಹಲಿಯಲ್ಲಿ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ನಾಯ್ಡು

By

Published : May 18, 2019, 2:33 PM IST

ನವದೆಹಲಿ:ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿರುವ ಹೊತ್ತಲ್ಲೇ ಆಂಧ್ರಪ್ರದೇಶ ಸಿಎಂ ಎನ್​. ಚಂದ್ರಬಾಬು ನಾಯ್ಡು ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್​​ ಕೇಜ್ರಿವಾಲ್​ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ.

ಇಬ್ಬರು ಸಿಎಂಗಳ ಭೇಟಿ ವೇಳೆ ಲೋಕ ಫಲಿತಾಂಶದ ಬಳಿಕದ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆದಿದೆ. ಫಲಿತಾಂಶದ ಬಳಿಕ ಸರ್ಕಾರ ರಚನೆಯಲ್ಲಿ ಅವಕಾಶವಿದ್ದರೆ ಟಿಡಿಪಿ ಹಾಗೂ ಎಎಪಿಯು ಏನೆಲ್ಲಾ ಪಾತ್ರ ವಹಿಸಬಹುದು ಎಂಬುದರ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ.

ಇದು ಚಂದ್ರಬಾಬು ನಾಯ್ಡು ಅವರೇ ತಮ್ಮನ್ನು ಭೇಟಿ ಮಾಡಿದ್ದಾರೆ ಎಂದು ಎಎಪಿ ಹೇಳಿಕೊಂಡಿದೆ. ಇದಕ್ಕೂ ಮುನ್ನ ನಾಯ್ಡು ಇಂದು ಬೆಳಗ್ಗೆ ಸಿಪಿಐ(ಎಂ) ಜನರಲ್​ ಸೆಕ್ರೇಟರಿ ಸಿತಾರಾಮ್​ ಯೆಚುರಿಯವರನ್ನು ಭೇಟಿ ಮಾಡಿದ್ದರು.

ಅಲ್ಲದೆ ನಾಯ್ಡು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಹಾಗೂ ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿಯವರನ್ನೂ ಕೂಡ ಭೇಟಿ ಮಾಡಲಿದ್ದಾರೆ.

For All Latest Updates

TAGGED:

ABOUT THE AUTHOR

...view details