ಕರ್ನಾಟಕ

karnataka

ETV Bharat / bharat

ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಲು ನೆರವಾದ ಆಂಧ್ರ ಪೊಲೀಸರು - ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲು ನೆರವಾದ ಆಂಧ್ರ ಪೊಲೀಸರು

ತೆಲಂಗಾಣದಿಂದ ಪಶ್ಚಿಮ ಬಂಗಾಳದ ತಮ್ಮೂರಿಗೆ ತೆರಳುತ್ತಿದ್ದ ಗರ್ಭಿಣಿ ಮಹಿಳೆಯೊಬ್ಬರಿಗೆ ಆಂಧ್ರದ ಇಚಾಪುರಂಗೆ ತಲುಪುತ್ತಿದ್ದಂತೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಈ ವೇಳೆ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ.

Andhra police help pregnant woman reach hospital amid lockdown
ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲು ನೆರವಾದ ಆಂಧ್ರ ಪೊಲೀಸರು

By

Published : May 19, 2020, 1:19 PM IST

ಶ್ರೀಕಾಕುಲಂ:ಲಾಕ್​ಡೌನ್ ನಡುವೆ ಗರ್ಭಿಣಿ ಮಹಿಳೆಯೊಬ್ಬಳನ್ನು ಆಸ್ಪತ್ರೆಗೆ ದಾಖಲಿಸಲು ಆಂಧ್ರ ಪ್ರದೇಶ ಪೊಲೀಸರು ನೆರವಾಗಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ಗರ್ಭಿಣಿ ತುಶಿಜೆನಾ ಎಂಬುವರು ಗಂಡನ ಜೊತೆ ಭಾನುವಾರ ತೆಲಂಗಾಣದಿಂದ ತಮ್ಮೂರಿಗೆ ಬಸ್​​ನಲ್ಲಿ ತೆರಳುತ್ತಿದ್ದರು. ಬಸ್​ ಆಂಧ್ರದ ಇಚಾಪುರಂ ತಲುಪುತ್ತಿದ್ದಂತೆ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ಅಲ್ಲಿದ್ದವರು ಇಚಾಪುರಂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಬಂದ ಪೊಲೀಸರು, ಆಕೆಯನ್ನು ಇಚಾಪುರಂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಮಹಿಳೆಯನ್ನು ಒಡಿಶಾದ ಬೆರ್ಹಾಂಪುರ್ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದ್ದು, ಅಲ್ಲಿ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ತಾಯಿ-ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ.

ABOUT THE AUTHOR

...view details