ಆಂಧ್ರ ಪ್ರದೇಶ:ಚಲಿಸುತ್ತಿದ್ದ ಬಸ್ನಲ್ಲಿ ಯುವತಿ ಜೊತೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಯೋರ್ವನ ಮೇಲೆ ಆಂಧ್ರ ಪ್ರದೇಶದ ಪೊಲೀಸರು 'ಜೀರೋ ಎಫ್ಐಆರ್' ದಾಖಲಿಸಿದ್ದಾರೆ.
ಯುವತಿಯು ದಿಶಾ ಆ್ಯಪ್ ಮೂಲಕ ಎಲೂರು ಪೊಲೀಸರಿಗೆ ಎಸ್ಒಎಸ್ ಕರೆ ಮಾಡಿ ಮಂಗಳವಾರ ಬೆಳಗ್ಗೆ 4 ಗಂಟೆಗೆ ದೂರು ನೀಡಿದ್ದು, ಆರೋಪಿಯನ್ನು ವಶಪಡಿಸಿಕೊಂಡಿರುವುದಾಗಿ ದಿಶಾ ವಿಶೇಷ ಅಧಿಕಾರಿ ದೀಪಿಕಾ ತಿಳಿಸಿದ್ದಾರೆ.
ಫೆ. 8 ರಂದು ಮಹಿಳೆ ಹಾಗೂ ಮಕ್ಕಳ ವಿರುದ್ಧದ ಅಪರಾಧ ಪ್ರಕರಣಗಳನ್ನು ನೋಡಿಕೊಳ್ಳುವ ಸಲುವಾಗಿ ಆಂಧ್ರ ಪ್ರದೇಶದ ರಾಜಾಮಹೇಂದ್ರವರಂ ಪಟ್ಟಣದಲ್ಲಿ ಮೊದಲ 'ದಿಶಾ ಪೊಲೀಸ್ ಠಾಣೆ'ಯನ್ನು ಹಾಗೂ ಮಹಿಳೆಯರ ರಕ್ಷಣೆಗಾಗಿ 'ದಿಶಾ ಆ್ಯಪ್' ಅನ್ನು ಸಿಎಂ ವೈ.ಎಸ್.ಜಗನ್ ಮೋಹನ್ ರೆಡ್ಡಿ ಲೋಕಾರ್ಪಣೆ ಮಾಡಿದ್ದರು. ಇದೀಗ ದಿಶಾ ಆ್ಯಪ್ ಮೂಲಕ ಮೊದಲ ಕರೆ ಬಂದಿದ್ದು, ಆರೋಪಿಯನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
'ದಿಶಾ ಆ್ಯಪ್', ಇದೊಂದು ಎಸ್ಒಎಸ್ ಮೊಬೈಲ್ ಅಪ್ಲಿಕೇಶನ್ ಆಗಿದ್ದು, ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಮಹಿಳೆಯರು ಈ ಆ್ಯಪ್ನಲ್ಲಿರುವ ಬಟನ್ ಒತ್ತಿದರೆ ಸಾಕು, ಇದು ನೇರವಾಗಿ ಪೊಲೀಸ್ ಕಂಟ್ರೋಲ್ ರೂಂಗೆ ಕರೆಯನ್ನು ಸಂಪರ್ಕ ಮಾಡಲಿದೆ.