ವಿಜಯವಾಡ:ಮನೆಯಲ್ಲಿನ ಕೆಲಸ ಬಿಟ್ಟು ಟಿಕ್ಟಾಕ್ ವಿಡಿಯೋ ಮಾಡುವುದರಲ್ಲೇ ಕಾಲಕಳೆಯುತ್ತಿದ್ದ ಮಹಿಳೆಯೋರ್ವಳನ್ನ ಆಕೆಯ ಗಂಡ ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ.
ಪ್ರತಿದಿನ ಟಿಕ್ಟಾಕ್ ಮಾಡುವುದನ್ನೇ 30 ವರ್ಷದ ಫಾತಿಮಾ ಹವ್ಯಾಸ ಮಾಡಿಕೊಂಡಿದ್ದಳು. ಅಕ್ಟೋಬರ್ 27ರಂದು ಆಕೆಯ ಕೊಲೆ ಮಾಡಿರುವ ಗಂಡ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ನೇತು ಹಾಕಿದ್ದನು. ಈ ವೇಳೆ ಪೊಲೀಸರು ಇದೊಂದು ಆತ್ಮಹತ್ಯೆ ಎಂದು ಹೇಳಿದ್ದರು. ಆದರೆ ಇದೀಗ ಮರಣೋತ್ತರ ಪರೀಕ್ಷೆಯ ವರದಿಯಿಂದ ಗಂಡನಿಂದಲೇ ಆಕೆಯ ಕೊಲೆ ನಡೆದಿದೆ ಎಂಬ ಸತ್ಯಾಂಶ ಹೊರಬಿದ್ದಿದೆ.