ಪೂರ್ವ ಗೋದಾವರಿ:ಸೆಪ್ಟೆಂಬರ್ 6 ರಂದು 62 ವರ್ಷದ ಹಳೆಯ ರಥಕ್ಕೆ ಬೆಂಕಿ ತಗುಲಿದ ಪರಿಣಾಮ ಆಂಧ್ರಪ್ರದೇಶ ಸರ್ಕಾರ, ಅಂತರ್ವೇದಿ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದ ಹೊಸ ರಥ ನಿರ್ಮಾಣಕ್ಕೆ ಚಾಲನೆ ನೀಡಿದೆ.
ಈ ರಥ 41 ಅಡಿ ಉದ್ದ, 6 ಅಡಿ ಸುತ್ತಳತೆ ಹೊಂದಿದ್ದು, ಇದಕ್ಕಾಗಿ ಬಳಸುವ ಮರವು 100 ವರ್ಷಕ್ಕಿಂತ ಹಳೆಯದಾಗಿರಬೇಕು. ಈಗಾಗಲೇ ರಥ ನಿರ್ಮಾಣ ಕಾರ್ಯ ಆರಂಭವಾಗಿದೆ. ಹೊಸ ರಥದ ನಿರ್ಮಾಣ ಮತ್ತು ಹಳೆ ರಥದ ಶೆಡ್ ದುರಸ್ಥಿಗೆ 95 ಲಕ್ಷ ರೂ. ಖರ್ಚಾಗಲಿದೆ.
ಇತ್ತೀಚೆಗೆ ಬೆಂಕಿ ತಗುಲಿದ್ದ ಹಳೆಯ ರಥದ ಬದಲಾಗಿ ಈ ಹೊಸ ಹೊಸ ರಥವನ್ನು ಬಳಸಲಾಗುವುದು ಎಂದು ಆಂಧ್ರಪ್ರದೇಶದ ದತ್ತಿ ವಿಭಾಗದ ಹೆಚ್ಚುವರಿ ಆಯುಕ್ತ ಕೆ ರಾಮಚಂದ್ರ ಮೋಹನ್ ಹೇಳಿದ್ದಾರೆ.
ತೇಗದ ಮರ 21 ಅಡಿ ಉದ್ದ ಮತ್ತು 6 ಅಡಿ ಸುತ್ತಳತೆ ಹೊಂದಿರಬೇಕು ಮತ್ತು 100 ವರ್ಷಕ್ಕಿಂತಲೂ ಹಳೆಯದಾಗಿರಬೇಕು. ಅಂತಹ ಮರವನ್ನು ಪೂರ್ವ ಗೋದಾವರಿ ಜಿಲ್ಲೆಯ ರಾವುಲಪಾಲೆಂ ಪಟ್ಟಣದ ಮರದ ಡಿಪೋದಲ್ಲಿ ಗುರುತಿಸಲಾಗಿದೆ. ರಥದ ನಿರ್ಮಾಣದಲ್ಲಿ ಸುಮಾರು 1330 ಘನ ಅಡಿ ಮರವನ್ನು ಬಳಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.