ಕರ್ನಾಟಕ

karnataka

ETV Bharat / bharat

ಆಂಧ್ರದ ಮೇಲ್ಮನೆ ರದ್ದತಿಗೆ ಅನುಮತಿ ನೀಡಿ: ಕೇಂದ್ರಕ್ಕೆ ಜಗನ್ ಸರ್ಕಾರ ಮನವಿ - ಜಗನ್ ಮೋಹನ್ ರೆಡ್ಡಿ ಸರ್ಕಾರ

ಸದ್ಯಕ್ಕೆ ಕೆಲವು ರಾಜ್ಯಗಳಲ್ಲಿ ವಿಧಾನ ಪರಿಷತ್ ಅಸ್ತಿತ್ವದಲ್ಲಿದ್ದು, ಈಗ ಆಂಧ್ರ ಸರ್ಕಾರ ಅಲ್ಲಿನ ಮೇಲ್ಮನೆಯನ್ನು ರದ್ದುಗೊಳಿಸಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.

jagan mohan reddy
ಜಗನ್​ ಮೋಹನ್ ರೆಡ್ಡಿ

By

Published : Sep 15, 2020, 7:31 AM IST

Updated : Sep 15, 2020, 8:08 AM IST

ಅಮರಾವತಿ (ಆಂಧ್ರ ಪ್ರದೇಶ):ರಾಜ್ಯದ ವಿಧಾನ ಪರಿಷತ್ ರದ್ದು ಮಾಡಲು ಶೀಘ್ರವಾಗಿ ಕ್ರಮ ಕೈಗೊಳ್ಳಬೇಕೆಂದು ಆಂಧ್ರ ಪ್ರದೇಶ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.

ತಮ್ಮ ಪಕ್ಷದ ಸಂಸದರೊಂದಿಗೆ ವಿಡಿಯೋ ಕಾನ್ಫರೆನ್ಸ್​ನಲ್ಲಿ ಮಾತನಾಡಿದ ಸಿಎಂ ಜಗನ್​ ಮೋಹನ್ ರೆಡ್ಡಿ, ಈಗ ನಡೆಯುತ್ತಿರುವ ಸಂಸತ್​ನ ಮಾನ್ಸೂನ್ ಅಧಿವೇಶನದಲ್ಲಿ ಕೆಲವೊಂದು ವಿಚಾರಗಳ ಬಗ್ಗೆ ಧ್ವನಿಯೆತ್ತುವಂತೆ ಮನವಿ ಮಾಡಿದರು.

ವಿಧಾನ ಪರಿಷತ್​ ರದ್ದು ಕುರಿತು ಜನವರಿ 27ರಂದು ವಿಧಾನಸಭೆ ಮಸೂದೆಯನ್ನು ಅಂಗೀಕರಿಸಿದ್ದು, ಇದು ಜಾರಿಗೊಳ್ಳಬೇಕಾದರೆ ಕೇಂದ್ರ ಸರ್ಕಾರದ ಅನುಮತಿ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಜಗನ್, ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಆಂಧ್ರದ ಮೇಲ್ಮನೆಯಲ್ಲಿ ಈಗ 58 ಮಂದಿ ಸದಸ್ಯರಿದ್ದು, ಇಲ್ಲಿ ತೆಲುಗು ದೇಶಂ ಪಕ್ಷದ ಸದಸ್ಯರು ಸಾಕಷ್ಟು ಮಂದಿಯಿದ್ದಾರೆ. ಇದರಿಂದ ಪ್ರಮುಖ ಮಸೂದೆಗಳನ್ನು ಜಾರಿಗೊಳಿಸಲು ಆಗದ ಕಾರಣದಿಂದ ಪರಿಷತ್ ರದ್ದು ಮಾಡಲು ತೀರ್ಮಾನ ಮಾಡಲಾಗಿದೆ ಎಂದು ವೈಎಸ್ಆರ್​ಸಿ ಮೂಲಗಳು ತಿಳಿಸಿವೆ.

​​ಇದರ ಜೊತೆಗೆ ರಾಜ್ಯದಲ್ಲಿ ಅತ್ಯಾಚಾರ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಲು ಜಾರಿಗೆ ತರಲು ಆಂಧ್ರ ಪ್ರದೇಶ ದಿಶಾ ಅಪರಾಧ ಕಾನೂನು(ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಿದ್ದು, ಇದನ್ನು ರಾಷ್ಟ್ರಪತಿ ಸಹಿಗೆ ಒತ್ತಾಯಿಸಬೇಕೆಂದು ಸಂಸದರಲ್ಲಿ ಜಗನ್​ ಮನವಿ ಮಾಡಿದ್ದಾರೆ.

Last Updated : Sep 15, 2020, 8:08 AM IST

ABOUT THE AUTHOR

...view details