ಕರ್ನಾಟಕ

karnataka

ETV Bharat / bharat

ಕುಡಿದ ಮತ್ತಿನಲ್ಲಿಎಂಪಿ ಅಭ್ಯರ್ಥಿ ರಂಪಾಟ.... ಪವರ್​​ ಸ್ಟಾರ್​​ ವಿರುದ್ಧ ಭರ್ಜರಿ ಟಾಂಗ್​​​...!! - ಪಿಕೆ ವಿರುದ್ಧ ವಾಗ್ದಾಳಿ

ವೈಎಸ್​ಆರ್​ ಕಾಂಗ್ರೆಸ್​ ಪಕ್ಷದ ಎಂಪಿ ಅಭ್ಯರ್ಥಿಯೊಬ್ಬರು ಕುಡಿದ ಮತ್ತಿನಲ್ಲೇ ಭಾಷಣ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸೌಂಡು ಮಾಡುತ್ತಿದೆ. ಅವರ ಭಾಷಣದ ವೈಖರಿ ಇಲ್ಲಿದೆ ನೋಡಿ...

ಕುಡಿದ ಮತ್ತಿನಲ್ಲಿ ಅಭ್ಯರ್ಥಿ ಪರ ಭಾಷಣ

By

Published : Apr 1, 2019, 1:49 PM IST

ಆಂಧ್ರಪ್ರದೇಶದಲ್ಲಿ ಸೂರ್ಯನ ಪ್ರಖರತೆಯಷ್ಟೇ ತೀಕ್ಷ್ಣವಾಗಿ ಎಲೆಕ್ಷನ್​ ಕಾವು ಜೋರಾಗಿದೆ. ಈ ಕಾವನ್ನೇ ಮತ್ತಷ್ಟು ಹೆಚ್ಚಾಗುವಂತೆ ಮಾಡಿದ್ದು, ವೈ​ಆರ್​ಎಸ್​ ​ ಕಾಂಗ್ರೆಸ್​ ಎಂಪಿ ಅಭ್ಯರ್ಥಿ. ಇವರು ಮಾಡಿದ್ದೇನಪ್ಪ ಅಂದ್ರೆ ಇವ್ರೆ ಎಣ್ಣೆ ಹಾಕಿ ಹಿಗ್ಗಾ ಮುಗ್ಗಾ ಮಾತನಾಡಿದ್ದು.

ಕುಡಿದ ಮತ್ತಿನಲ್ಲಿ ಅಭ್ಯರ್ಥಿ ಪರ ಭಾಷಣ

ವೈಎಸ್​ಆರ್​ ಕಾಂಗ್ರೆಸ್​​ ಪಕ್ಷದ ಪೂರ್ವ ಗೋದಾವರಿ ಜಿಲ್ಲೆಯ ನರ್ಸಾಪುರ್​ ಎಂಪಿ ಅಭ್ಯರ್ಥಿ ರಘುರಾಂ ಕೃಷ್ಣಂ ರಾಜು, ಭೀಮಾವರಂನ ಎಂಎಲ್​ಎ ಅಭ್ಯರ್ಥಿ ಪರ ಪ್ರಚಾರ ನಡೆಸಿದರು. ಅದು ಕುಡಿದ ಮತ್ತಿನಲ್ಲಿ

ಭೀಮಾವರಂನಿಂದ ಪವನ್​ ಕಲ್ಯಾಣ್​ ಸ್ಪರ್ಧಿಸುತ್ತಿರುವ ವಿಚಾರ ಗೊತ್ತಿದೆ. ಅವರ ವಿರುದ್ಧ ಕುಡಿದು ಅಲಗಾಡುತ್ತಲೇ ವಾಗ್ದಾಳಿ ನಡೆಸಿದ ರಘುರಾಂ, ಗಬ್ಬರ್​ ಸಿಂಗ್​, ಸರ್ದಾರ್​ ಗಬ್ಬರ್​ ಸಿಂಗ್​ ಅಂತಹ ಹೀರೋಗಳನ್ನು ಸೋಲಿಸುವ ಶಕ್ತಿ ನಮ್ಮ ಅಭ್ಯರ್ಥಿಗೆ ಇದೆ. ನಮ್ಮ ಅಭ್ಯರ್ಥಿ ವಿರುದ್ಧ ಯಾರೇ ನಿಂತರೂ ಸೋಲು ಖಚಿತ ಎಂದು ಪವನ್​ ಕಲ್ಯಾಣ್​ ವಿರುದ್ಧ ಹರಿಹಾಯ್ದರು.

ಇನ್ನು ರಘುರಾಂ ಕೃಷ್ಣಂ ರಾಜು ಕುಡಿದು ಭಾಷಣ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.

ABOUT THE AUTHOR

...view details