ಕರ್ನಾಟಕ

karnataka

ETV Bharat / bharat

ಆಂಧ್ರ ಸಿಎಂ ಪುತ್ರ ಎಷ್ಟು ಕೋಟಿ ಆಸ್ತಿಯ ಒಡೆಯ ಗೊತ್ತೇ!? - Andhra CM

ಆಂಧ್ರ ಸಿಎಂ ಪುತ್ರನ ಹೆಸರಲ್ಲಿ 320 ಕೋಟಿ ರೂ. ಆಸ್ತಿ. ನಾಮಪತ್ರ ಸಲ್ಲಿಸುವಾಗ ಆಸ್ತಿ ವಿವರಗಳ ಅಫಿಡವಿಟ್ ಸಲ್ಲಿಸಿದ ಸಚಿವ ಲೋಕೇಶ್.

ಆಂಧ್ರ ಸಿಎಂ ಪುತ್ರ

By

Published : Mar 23, 2019, 11:13 AM IST

ಅಮರಾವತಿ: ಆಂಧ್ರ ಪ್ರದೇಶ ಸಿಎಂ ಎನ್​.ಚಂದ್ರಬಾಬು ನಾಯ್ಡು ಪುತ್ರ ಹಾಗೂ ಸಂಪುಟ ಸಚಿವ ಲೋಕೇಶ್ ಅವರು 320 ಕೋಟಿಗೂ ಅಧಿಕ ಆಸ್ತಿಪಾಸ್ತಿ ಹೊಂದಿದ್ದಾರೆ.

ಮಂಗಳಗಿರಿ ವಿಧಾನಸಭಾ ಕ್ಷೇತ್ರಕ್ಕೆ ಟಿಡಿಪಿ ಅಭ್ಯರ್ಥಿಯಾಗಿ ಶುಕ್ರವಾರ ನಾಮಪತ್ರ ಸಲ್ಲಿಸಿದ ವೇಳೆ ಲೋಕೇಶ್ ಅವರು ತಮ್ಮ ಆಸ್ತಿಯ ವಿವರಗಳನ್ನು ಪ್ರಕಟಿಸಿದ್ದಾರೆ.

ಆಂಧ್ರ ಸಿಎಂ ಪುತ್ರ 253 ಕೋಟಿ ರೂ. ಚರಾಸ್ತಿ ಹಾಗೂ 66 ಕೋಟಿ ರೂ. ಸ್ಥಿರಾಸ್ತಿಯ ಒಡೆಯರಾಗಿದ್ದಾರೆ. ಹೆರಿಟೇಜ್ ಫುಡ್​ ಲಿಮಿಟೆಡ್​ನಲ್ಲಿ 242 ಕೋಟಿ ರೂ. ಮೌಲ್ಯದ ಶೇರುಗಳಿರುವುದನ್ನು ಅಫಿಡವಿಟ್​ನಲ್ಲಿ ಉಲ್ಲೇಖಿಸಿದ್ದಾರೆ. ಉದ್ಯಮಿ ಆಗಿರುವ ಇವರ ಪತ್ನಿ ನಾರಾ ಬ್ರಾಹಮನಿ ಅವರು 47 ಕೋಟಿ ರೂ. ಬೆಲೆಯ ಆಸ್ತಿಗೆ ಯಜಮಾನಿಯಾಗಿದ್ದಾರೆ.

ಪ್ರತಿ ವರ್ಷ ಚಂದ್ರಬಾಬು ನಾಯ್ಡು ತಮ್ಮ ಕುಟುಂಬದ ಆಸ್ತಿ ವಿವರಗಳನ್ನು ಸ್ವಯಂ ಪ್ರೇರಿತರಾಗಿ ಘೋಷಿಸುತ್ತಾರೆ.

For All Latest Updates

TAGGED:

Andhra CM

ABOUT THE AUTHOR

...view details