ಕರ್ನಾಟಕ

karnataka

ETV Bharat / bharat

ಅಮಿತ್‌ ಶಾ ಭೇಟಿಯಾದ ಜಗನ್​: ಅನುದಾನಕ್ಕೆ ಮನವಿ - ವೈಎಸ್‌ ಜಗನ್‌ ಮೋಹನ್‌ ರೆಡ್ಡಿ

ಆಂಧ್ರ ಸಿಎಂ ಜಗನ್ ಮೋಹನ್‌ ರೆಡ್ಡಿ ಇಂದು ಕೇಂದ್ರ ಸಚಿವ ಅಮಿತ್‌ ಶಾರನ್ನು ಭೇಟಿ ಮಾಡಿದ್ದು, ಕೇಂದ್ರದಿಂದ ರಾಜ್ಯಕ್ಕೆ ನೀಡಬೇಕಿರುವ ಅನುದಾವನ್ನು ಬಿಡುಗಡೆ ಮಾಡುವಂತ ಕೋರಿದ್ದಾರೆ. ಆಂಧ್ರ ಅಭಿವೃದ್ಧಿಗೆ ಸಂಬಂಧಿಸಿದ ಹಲವು ವಿಚಾರಗಳ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ.

andhra-cm-discusses-states-issues-with-home-minister-shah
ಆಂಧ್ರ ಸಿಎಂ ಜಗನ್‌ರಿಂದ ಸಚಿವ ಅಮಿತ್‌ ಶಾ ಭೇಟಿ‌; ಅನುದಾನಕ್ಕೆ ಮನವಿ

By

Published : Sep 23, 2020, 5:06 PM IST

ದೆಹಲಿ/ಅಮರಾವತಿ:ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈಎಸ್‌ ಜಗನ್‌ ಮೋಹನ್‌ ರೆಡ್ಡಿ ದೆಹಲಿಯಲ್ಲಿಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ರಾಜ್ಯ ಅಭಿವೃದ್ಧಿ ಕುರಿತ ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ.

ನಿನ್ನೆ ಸಂಜೆಯೂ ಅಮಿತ್‌ ಶಾರನ್ನು ಭೇಟಿ ಮಾಡಿದ್ದ ರೆಡ್ಡಿ ಅವರು ಮಾತುಕತೆ ನಡೆಸಿದ್ದರು. ಇಂದು ನಡೆದ 45 ನಿಮಿಷಗಳ ಮಾತುಕತೆಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ನೀಡಬೇಕಾದ ಅನುದಾನ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.

ಆಂಧ್ರಪ್ರದೇಶವನ್ನು 2 ರಾಜ್ಯಗಳಾಗಿ ಇಬ್ಭಾಗ ಮಾಡಿದ ಬಳಿಕ ಕಾನೂನ ಪ್ರಕಾರ ಆಂಧ್ರ ಪ್ರದೇಶ ಕೇಂದ್ರದ ಅನುದಾನಕ್ಕೆ ಅರ್ಹವಾಗಿದೆ. ರಾಜ್ಯಗಳ ವಿಂಗಡಣೆ ಬಳಿಕ ಆಂಧ್ರ ಹಲವು ಸಮಸ್ಯೆಗಳನ್ನು ಎದುರಿಸಲಾಗುತ್ತಿದೆ. ಇದೀಗ ಕೋವಿಡ್‌-19 ನಿಂದಾಗಿ ಮತ್ತಷ್ಟು ಸಮಸ್ಯೆಗಳು ಉಂಟಾಗಿವೆ. ಅನುದಾನದ ಕೊರತೆಯಾಗಿದೆ. ಬಿಕ್ಕಟ್ಟಿನಿಂದ ಪಾರಾಗಲು ಕೇಂದ್ರ ನೆರವು ಅಗತ್ಯವಾಗಿದೆ ಎಂದು ಕೇಂದ್ರ ಸಚಿವರಿಗೆ ಸಿಎಂ ಜಗನ್‌ ಮನವರಿಕೆ ಮಾಡಿಕೊಟ್ಟಿದ್ದಾರೆ.

ದೆಹಲಿ ಪ್ರವಾಸ ಮುಗಿಸಿ ವಾಪಸಾಗುತ್ತಿರುವ ಸಿಎಂ ಜನಗ್‌, ತಿರುಪತಿ ಸಮೀಪದ ರೆನಿಗುಂಟಾದಲ್ಲಿ ಹಮ್ಮಿಕೊಂಡಿರುವ ಬ್ರಹ್ಮೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಅದೇ ಮಾರ್ಗದಲ್ಲಿರುವ ತಿರುಪತಿಗೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ABOUT THE AUTHOR

...view details