ಹೈದರಾಬಾದ್:ಕೊರೊನಾ ಸೊಂಕು ಹೆಚ್ಚಾಗಿರುವ ಪರಿಣಾಮ ವಾಹನಗಳ ಸಂಚಾರ ಬಂದ್ ಮಾಡಿರುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ತನ್ನ ವಾಹನದಲ್ಲೇ ಸಾಮಾಜಿಕ ಅಂಂತಕ ಕಾಪಾಡುವ ಹೊಸ ಪ್ರಯತ್ನ ಮಾಡಿದ್ದಾನೆ.
ಆಟೋದಲ್ಲಿ ಸಾಮಾಜಿಕ ಅಂತರ.... ಚಾಲಕನ ಆವಿಷ್ಕಾರಕ್ಕೆ ಆನಂದ್ ಮಹೀಂದ್ರಾ ಫಿದಾ..!
ಸಂಚರಿಸುವ ವಾಹನದಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಹಾಯವಾಗುವಂತೆ ವ್ಯಕ್ತಿಯೊಬ್ಬ ತನ್ನ ಆಟೋವನ್ನು ಅಭಿವೃದ್ಧಿಪಡಿಸಿರುವ ರೀತಿಯನ್ನು ಉದ್ಯಮಿ ಆನಂದ್ ಮಹೀಂದ್ರಾ ಮೆಚ್ಚಿಕೊಂಡಿದ್ದಾರೆ.
ಉದ್ಯಮಿ ಆನಂದ್ ಮಹೀಂದ್ರಾ ಒಂದು ವಿಡಿಯೋವನ್ನು ಟ್ವಿಟ್ ಮಾಡಿದ್ದು, ಆಟೋ ಚಾಲಕನ ವಿನೂತನ ಪ್ರಯತ್ನವನ್ನು ಕೊಂಡಾಡಿದ್ದಾರೆ. ವ್ಯಕ್ತಿಯೋರ್ವ ತನ್ನ ವಾಹನದಲ್ಲೇ ನಾಲ್ಕು ಪ್ರತ್ಯೇಕ ಬಾಕ್ಸ್ಗಳನ್ನು ಸೃಷ್ಟಿಮಾಡಿದ್ದು, ಸವಾರರು ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಸಹಾಯವಾಗುವಂತೆ ವಾಹನವನ್ನು ಅಭಿವೃದ್ಧಿ ಪಡೆಸಿದ್ದಾನೆ.
ಹೊಸ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ನಮ್ಮ ಜನರು ಅತಿ ವೆಗವಾಗಿ ಹೊಸತನವನ್ನು ಕಂಡು ಕೊಳ್ಳುತ್ತ ನಮ್ಮನ್ನ ವಿಸ್ಮಯ ಗೊಳಿಸುತ್ತಾರೆ. ಈ ವ್ಯಕ್ತಿಯನ್ನು ನಮ್ಮ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಸಲಹೆಗಾರನಾಗಿ ನೇಮಿಸಿಕೊಳ್ಳಬೇಕು ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.