ಪೂರ್ವ ಗೋದಾವರಿ: ಐದು ವರ್ಷದ ಬಾಲಕಿ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಸ್ಮಶಾನದಲ್ಲಿ ಅತ್ಯಾಚಾರ ಎಸಗಿರುವ ಘಟನೆ ಕಾಕಿನಾಡದಲ್ಲಿ ನಡೆದಿದೆ.
ಐದು ವರ್ಷದ ಬಾಲಕಿ ಅಪಹರಿಸಿ ಅತ್ಯಾಚಾರ ಎಸಗಿದ ಅಪರಿಚಿತ! - ಪೂರ್ವ ಗೋದಾವರಿ ಅಪರಾಧ ಸುದ್ದಿ
ಅಪರಿಚಿತನೊಬ್ಬ 5 ವರ್ಷದ ಬಾಲಕಿ ಅಪಹರಿಸಿ ಸ್ಮಶಾನಕ್ಕೆ ಹೊತ್ತೊಯ್ದು ಅತ್ಯಾಚಾರ ಎಸಗಿರುವ ಘಟನೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.
ಪೊಲೀಸರ ವಿವರ ಪ್ರಕಾರ, ಬಾಲಕಿ ತಾಯಿ ಕೆಲಸದ ನಿಮಿತ್ತ ಹೈದರಾಬಾದ್ಗೆ ತೆರಳಿದ್ದಾರೆ. ಬಾಲಕಿ ಅಜ್ಜಿ, ಅಜ್ಜ ಮತ್ತು ತಂದೆ ಜೊತೆ ಇದ್ದಳು. ರಾತ್ರಿ ವೇಳೆ ಅಜ್ಜಿಯ ಪಕ್ಕದಲ್ಲಿ ಬಾಲಕಿ ಮಲಗಿದ್ದಳು. ಈ ವೇಳೆ, ಅಪರಿಚಿತ ವ್ಯಕ್ತಿ ಬಾಲಕಿ ಅಪಹರಿಸಿ ಸ್ಮಶಾನಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಸ್ಮಶಾನದ ದಾರಿ ಕಡೆಯಿಂದ ಹೋಗುತ್ತಿದ್ದ ಸ್ಥಳೀಯರು ಬಾಲಕಿಯನ್ನು ನಗ್ನ ಸ್ಥಿತಿಯಲ್ಲಿರುವುದು ನೋಡಿದ್ದಾರೆ. ಬಾಲಕಿಯನ್ನು ಶೋಧಿಸುತ್ತಿದ್ದ ಕುಟುಂಬಕ್ಕೆ ಸ್ಥಳೀಯರು ಒಪ್ಪಿಸಿದ್ದಾರೆ. ಬಾಲಕಿಯನ್ನು ಕೂಡಲೇ ಕಾಕಿನಾಡ ಜಿಜಿಹೆಚ್ ಆಸ್ಪತ್ರೆಗೆ ಕರೆದೊಯ್ದರು. ಈ ಘಟನೆ ಕುರಿತು ಕಾಕಿನಾಡ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.