ಕರ್ನಾಟಕ

karnataka

ETV Bharat / bharat

ಕೊಳದಲ್ಲಿ ಮುಳುಗಿ  ತಾಯಿ - ಮಗ ಸೇರಿ ಮೂವರ ಸಾವು! - ದೇವಾಲಯದ ಕೊಳದಲ್ಲಿ ಮೂವರು ಮುಳುಗಿ ಸಾವು

ವಾಘೋಲಿಯ ಭೈರವನಾಥ ದೇವಸ್ಥಾನದ ಬಳಿಯ ಕೊಳದಲ್ಲಿ ಆಕಸ್ಮಿಕವಾಗಿ ರೋಹಿಣಿ ಸಂಜಯ್ ಪಟೋಲೆ(40), ಸ್ವಪ್ನಿಲ್ ಸಂಜಯ್ ಪಟೋಲೆ​ (12) ಮತ್ತು ದತ್ತಾತ್ರಯ ರಂಗನಾಥ ಜಾಧವ್ (42) ಎಂಬುವವರು ಮುಳುಗಿ ಸಾವನಪ್ಪಿದ್ದಾರೆ.

An unfortunate death of a trio with mother and son in Pune!
ವಾಘೋಲಿಯ ಭೈರವನಾಥ ದೇವಸ್ಥಾನದ ಬಳಿಯ ಕೊಳದಲ್ಲಿ ತಾಯಿ-ಮಗ ಸೇರಿ ಮೂವರು ಮುಳುಗಿ ಸಾವು!

By

Published : Jan 21, 2020, 7:52 PM IST

ಪುಣೆ( ಮಹಾರಾಷ್ಟ್ರ):ವಾಘೋಲಿಯ ಭೈರವನಾಥ ದೇವಸ್ಥಾನದ ಬಳಿಯ ಕೊಳದಲ್ಲಿ ಆಕಸ್ಮಿಕವಾಗಿ ತಾಯಿ ಮತ್ತು ಮಗ ಸೇರಿ ಮೂವರು ಮುಳುಗಿ ಸಾವನ್ನಪ್ಪಿದ್ದಾರೆ.

ಮೃತರನ್ನು ವಾಘೋಲಿ ಗೌಥನ್​ನ ರೋಹಿಣಿ ಸಂಜಯ್ ಪಟೋಲೆ(40), ಸ್ವಪ್ನಿಲ್ ಸಂಜಯ್ ಪಾಟೋಲೆ​ (12) ಮತ್ತು ದತ್ತಾತ್ರೇಯ ರಂಗನಾಥ ಜಾಧವ್ (42) ಎಂದು ಗುರುತಿಸಲಾಗಿದೆ. ಸದ್ಯ ಲೋನಿಕಂದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೋಹಿಣಿ ಮತ್ತು ಅವರ ಪುತ್ರ ಸ್ವಪ್ನಿಲ್ ಬಟ್ಟೆ ಒಗೆಯುವ ಸಲುವಾಗಿ ದೇವಾಲಯದ ಕೊಳಕ್ಕೆ ಹೋಗಿದ್ದರು. ಪುತ್ರ ಸ್ವಪ್ನಿಲ್ ನೀರಿಗೆ ಇಳಿದಿದ್ದನ್ನು ಗಮನಿಸಿ ತಾಯಿಯೂ ಆತನ ರಕ್ಷಣೆಗಾಗಿ ಮುಂದಾಗಿದ್ದಾರೆ. ಆದ್ರೆ ನೀರಿನಿಂದ ಮೇಲೆ ಬರಲು ಸಾಧ್ಯವಾಗದೇ ಇದ್ದಿದ್ದನ್ನು ಗಮನಿಸಿದ ದತ್ತಾತ್ರೇಯ ರಂಗನಾಥ ಜಾಧವ್ ಎಂಬುವವರು ಸಹ ಅವರ ರಕ್ಷಣೆಗಾಗಿ ಕೆರೆಗೆ ಹಾರಿದ್ದಾರೆ. ದುರದೃಷ್ಟವಶಾತ್​ ಮೂವರು ನೀರಿನಿಂದ ಮೇಲೆ ಬರಲು ಸಾಧ್ಯವಾಗದೇ ಮೂವರೂ ಮೃತಪಟ್ಟಿದ್ದಾರೆ.

I

ABOUT THE AUTHOR

...view details