ಮುಂಬೈ (ಮಹಾರಾಷ್ಟ್ರ): ರೈತರು ದೆಹಲಿಗೆ ಪ್ರವೇಶಿಸುವುದನ್ನು ತಡೆಯುತ್ತಿರುವ ರೀತಿಯನ್ನು ನೋಡಿದರೆ ರೈತರನ್ನು ಭಯೋತ್ಪಾದಕರಂತೆ ಪರಿಗಣಿಸಿದಂತೆ ಅನ್ನಿಸುತ್ತಿದೆ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನಾನಿರತ ರೈತರನ್ನು ಭಯೋತ್ಪಾದಕರಂತೆ ಕಾಣಲಾಗುತ್ತಿದೆ.. ಸಂಜಯ್ ರಾವತ್ ಕಿಡಿ - ಹರಿಯಾಣ, ಪಂಜಾಬ್ ರೈತರ 'ದೆಹಲಿ ಚಲೋ' ಪ್ರತಿಭಟನೆ
ಕೇಂದ್ರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ಹರಿಯಾಣ, ಪಂಜಾಬ್ ರೈತರು 'ದೆಹಲಿ ಚಲೋ' ಪ್ರತಿಭಟನೆ ನಡೆಸುತ್ತಿದ್ದಾರೆ. ಇವರು ದೆಹಲಿ ಪ್ರವೇಶಿಸದಂತೆ ಟಿಕ್ರಿ, ಸಿಂಘು ಗಡಿಯಲ್ಲೇ ತಡೆಯಲಾಗುತ್ತಿದೆ. ಅಲ್ಲದೇ ಪ್ರತಿಭಟನಾನಿರತ ರೈತರ ಮೇಲೆ ಜಲಫಿರಂಗಿ, ಅಶ್ರುವಾಯು ಪ್ರಯೋಗಿಸಲಾಗುತ್ತಿದೆ..
ರಾಷ್ಟ್ರ ರಾಜಧಾನಿ ಪ್ರವೇಶಿಸದಂತೆ ಅವರನ್ನು ತಡೆದ ರೀತಿಯು ಆ ರೈತರು ನಮ್ಮ ದೇಶದವರಲ್ಲ ಎಂಬಂತೆ ತೋರುತ್ತಿದೆ. ಅವರು ಸಿಖ್ ಧರ್ಮಕ್ಕೆ ಸೇರಿದವರಾದ್ದರಿಂದ ಹಾಗೂ ಪಂಜಾಬ್ ಮತ್ತು ಹರಿಯಾಣದಿಂದ ಬಂದಿರುವ ಕಾರಣ ರೈತರನ್ನು 'ಖಲಿಸ್ತಾನಿ'ಗಳು ಎಂದೂ ಕರೆಯಲಾಗುತ್ತಿದೆ. ಇದು ಅನ್ನದಾತನಿಗೆ ಮಾಡುವ ಅವಮಾನ ಎಂದು ರಾವತ್ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಕೇಂದ್ರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ಹರಿಯಾಣ, ಪಂಜಾಬ್ ರೈತರು 'ದೆಹಲಿ ಚಲೋ' ಪ್ರತಿಭಟನೆ ನಡೆಸುತ್ತಿದ್ದಾರೆ. ಇವರು ದೆಹಲಿ ಪ್ರವೇಶಿಸದಂತೆ ಟಿಕ್ರಿ, ಸಿಂಘು ಗಡಿಯಲ್ಲೇ ತಡೆಯಲಾಗುತ್ತಿದೆ. ಅಲ್ಲದೇ ಪ್ರತಿಭಟನಾನಿರತ ರೈತರ ಮೇಲೆ ಜಲಫಿರಂಗಿ, ಅಶ್ರುವಾಯು ಪ್ರಯೋಗಿಸಲಾಗುತ್ತಿದೆ.