ಭೂತಾನ್:ಕಳೆದ ಕೆಲ ದಿನಗಳ ಹಿಂದೆ ಭಾರತೀಯ ವಾಯಸೇನೆಯ ಮಿಗ್ 21 ತರಬೇತಿ ಯುದ್ಧ ವಿಮಾನ ಪತನಗೊಂಡ ಬೆನ್ನಲ್ಲೇ ಇದೀಗ, ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಭೂತಾನ್ನಲ್ಲಿ ಪತನಗೊಂಡಿರುವ ಪರಿಣಾಮ ಇಬ್ಬರು ಪೈಲಟ್ಗಳು ಮೃತಪಟ್ಟಿರುವ ಘಟನೆ ನಡೆದಿದೆ.
ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಪತನ... ಇಬ್ಬರು ಪೈಲಟ್ ದುರ್ಮರಣ - ಚೀತಾ ಹೆಲಿಕಾಪ್ಟರ್ ಪತನ
ಭೂತಾನ್‌ನ ಯೋಂಗ್ಪುಲ್ಲಾದ ಬಳಿ ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಪತನಗೊಂಡಿದ್ದು, ಅದರಲ್ಲಿದ್ದ ಇಬ್ಬರು ಪೈಲಟ್ಗಳು ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ.
ಚೀತಾ ಹೆಲಿಕಾಪ್ಟರ್ ಪತನ
ಮಂಜಿನ ವಾತಾವರಣವಿದ್ದ ಕಾರಣ, ಭೂತಾನ್‌ನ ಯೋಂಗ್‌ಫುಲ್ಲಾದ ಖೆಂಟೊಂಗ್‌ಮನಿ ಹತ್ತಿರ ಮಧ್ಯಾಹ್ನ 1 ಗಂಟೆಗೆ ಈ ಹೆಲಿಕಾಪ್ಟರ್ ಅಪ್ಪಳಿಸಿರುವುದಾಗಿ ಭಾರತೀಯ ಸೇನೆಯ ವಕ್ತಾರ ಕರ್ನಲ್ ಅಮನ್ ಆನಂದ್ ಮಾಹಿತಿ ನೀಡಿದ್ದಾರೆ.
ಅಪಘಾತದಲ್ಲಿ ಮೃತಪಟ್ಟಿರುವವರನ್ನ ಸೇನಾ ಪೈಲಟ್ ಲೆಫ್ಟಿನೆಂಟ್ ಕರ್ನಲ್ ಶ್ರೇಣಿಯಲ್ಲಿದ್ದರೆ, ಇನ್ನೊಬ್ಬರು ಭಾರತೀಯ ಸೇನೆಯೊಂದಿಗೆ ಭೂತಾನ್ ಸೈನ್ಯದ ಪೈಲಟ್ ತರಬೇತಿ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ಕೆಲ ದಿನಗಳ ಹಿಂದೆ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಭಾರತೀಯ ವಾಯಸೇನೆಯ ಮಿಗ್ 21 ತರಬೇತಿ ಯುದ್ಧ ವಿಮಾನ ಪತನಗೊಂಡಿತ್ತು.
Last Updated : Sep 27, 2019, 5:31 PM IST