ಹೈದರಾಬಾದ್: ನಗರದಲ್ಲಿ ದಿನೇ ದಿನೇ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ದಿಶಾ ಪ್ರಕರಣವನ್ನು ಜನರು ಇನ್ನೂ ಮರೆತ್ತಿಲ್ಲ. ಅಷ್ಟರಲ್ಲೇ ಹಲವಾರು ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬಂದಿವೆ. ಈಗ ಕಾಮುಕ ಅಳಿಯ ತನ್ನ ಅತ್ತೆ ಮೇಲೆಯೇ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಅಪ್ರಾಪ್ತೆ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರ: ಆರೋಪಿಗಳ ಬಂಧನ
ಕೇರಳ ಮೂಲದ 48 ವರ್ಷದ ಮಹಿಳೆ ಇವರಾಗಿದ್ದು, ಆಸಿಫ್‌ನಗರದ ಶ್ರೀನಗರ ಕಾಲೋನಿಯಲ್ಲಿ 2016 ರಿಂದ ಮಗಳು ಹಾಗೂ ಅಳಿಯನೊಂದಿಗೆ ವಾಸ ಮಾಡುತ್ತಿದ್ದರು. ಮಗಳು ಮತ್ತು ಅಳಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಈಕೆ ತನ್ನ ಮೊಮ್ಮಗನನ್ನು ನೋಡಿಕೊಂಡು ಮನೆಯಲ್ಲೇ ಇದ್ದರು ಎನ್ನಲಾಗಿದೆ.