ಸುಕ್ಮಾ:ಛತ್ತೀಸ್ಘಡದ ಸುಕ್ಮಾದ ಮಿನ್ಪಾ ಪ್ರದೇಶದ ಬಳಿಯ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆ ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿಯಲ್ಲಿ 11ಯೋಧರಿಗೆ ತೀವ್ರವಾದ ಗಾಯಗಳಾಗಿವೆ.ಮಧ್ಯಾಹ್ನ 2;30 ರ ವೇಳೆಗೆ ಈ ಎನ್ಕೌಂಟರ್ ನಡೆದಿದ್ದು, ನಕ್ಸಲರ ದಾಳಿಗೆ ಪ್ರತಿಯಾಗಿ ನಕ್ಸಲ್ ನಿಗ್ರಹ ಪಡೆ ಕೋಬ್ರಾ ಪ್ರತಿದಾಳಿ ನಡೆಸಿದೆ.
ಸುಕ್ಮಾದಲ್ಲಿ ಭದ್ರತಾ ಪಡೆ-ನಕ್ಸಲರ ನಡುವೆ ಗುಂಡಿನ ಕಾಳಗ... 5 ನಕ್ಸಲರ ಹತ್ಯೆ? - 11 ಸೈನಿಕರಿಗೆ ಗಾಯ - ಭದ್ರತಾ ಪಡೆ-ನಕ್ಸಲರ ನಡುವೆ ಗುಂಡಿನ ಚಕಮಕಿ
ಛತ್ತೀಸ್ಘಡದ ಸುಕ್ಮಾದ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆ ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ಮುಂದುವರೆದಿದ್ದು, 11ಯೋಧರು ಗಾಯಗೊಂಡಿದ್ದಾರೆ. ಎನ್ಕೌಂಟರ್ನಲ್ಲಿ 4-5 ನಕ್ಸಲರು ಹತ್ಯೆಯಾಗಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಸುಕ್ಮಾದಲ್ಲಿ ಭದ್ರತಾ ಪಡೆ-ನಕ್ಸಲರ ನಡುವೆ ಗುಂಡಿನ ಚಕಮಕಿ
ಈ ನಡುವೆ ಕೋಬ್ರಾ ಪಡೆ ಎನ್ಕೌಂಟರ್ನಲ್ಲಿ ನಾಲ್ಕರಿಂದ ಐದು ನಕ್ಸಲರು ಸಾವನ್ನಪ್ಪಿರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಇನ್ನು 11 ಸೈನಿಕರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.
ಗಾಯಗೊಂಡ ಯೋಧರನ್ನ ಆಸ್ಪತ್ರೆಗೆ ರವಾನಿಸಲಾಗಿದೆ.
Last Updated : Mar 21, 2020, 11:14 PM IST