ಪೋರ್ಟ್ ಬ್ಲೇರ್:ಇತ್ತೀಚಿಗೆ ದೇಶದ ಹಲವೆಡೆ ಭೂಮಿ ಕಂಪಿಸುತ್ತಿದೆ. ಈಗ ಅಂಡಮಾನ್ ನಿಕೋಬಾರ್ನಲ್ಲಿ ಭೂಕಂಪನ ಸಂಭವಿಸಿದ ಬಗ್ಗೆ ವರದಿಯಾಗಿದೆ.
ಅಂಡಮಾನ್ ಮತ್ತು ನಿಕೋಬಾರ್ನಲ್ಲಿ ಭೂಕಂಪನ - ಭಾರತದಲ್ಲಿ ಭೂಕಂಪ
ಅಂಡಮಾನ್ ನಿಕೋಬಾರ್ನಲ್ಲಿ ಇಂದು ಮುಂಜಾನೆ ಭೂಕಂಪನ ಸಂಭವಿಸಿದ್ದು, ಯಾವುದೇ ಹಾನಿ, ಪ್ರಾಣಾಪಾಯದ ವರದಿಯಾಗಿಲ್ಲ.
![ಅಂಡಮಾನ್ ಮತ್ತು ನಿಕೋಬಾರ್ನಲ್ಲಿ ಭೂಕಂಪನ earthquake](https://etvbharatimages.akamaized.net/etvbharat/prod-images/768-512-7551233-thumbnail-3x2-raa.jpg)
ಭೂಕಂಪನ
ಮುಂಜಾನೆ 2.30ಕ್ಕೆ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.3ರ ತೀವ್ರತೆ ದಾಖಲಾಗಿದೆ. ದಿಗ್ಲಿಪುರದಿಂದ ವಾಯವ್ಯಕ್ಕೆ 110 ಕಿಲೋಮೀಟರ್ ದೂರದಲ್ಲಿ ಭೂಮಿ ಕಂಪಿಸಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮೋಲಜಿ ಮಾಹಿತಿ ನೀಡಿದೆ.