ಕರ್ನಾಟಕ

karnataka

ETV Bharat / bharat

ಸೇನಾಧಿಕಾರಿ ವಾಹನ ಅಪಘಾತ: ಮೇಜರ್​​​, ಕರ್ನಲ್​ ಸ್ಥಳದಲ್ಲೇ ಸಾವು, ಇಬ್ಬರಿಗೆ ಗಾಯ - ಸೇನಾಧಿಕಾರಿ ಸಾವು

ಸೈರುನಾ ಪೊಲೀಸ್ ಠಾಣೆ ಪ್ರದೇಶದಲ್ಲಿ ಸೇನಾಧಿಕಾರಿಯ ವಾಹನ ನಿಯಂತ್ರಣ ತಪ್ಪಿ ರಸ್ತೆಯಿಂದ ಕೆಳಗುರುಳಿದೆ. ಪರಿಣಾಮ ಸಫಾರಿ ವಾಹನದಲ್ಲಿದ್ದ ಕರ್ನಲ್​ ಮನೀಶ್ ಸಿಂಗ್ ಚೌವ್ಹಾಣ್​​​​​ ಮತ್ತು ಮೇಜರ್ ನೀರಜ್​​ ಶರ್ಮಾ ಮೃತಪಟ್ಟು, ಇಬ್ಬರು ಗಾಯಗೊಂಡಿದ್ದಾರೆ.

an-army-vehicle-met-with-an-accident-on-bikaner-jaipur-road
ಸೇನಾಧಿಕಾರಿ ವಾಹನ ಅಪಘಾತ: ಮೇಜರ್​​​, ಕರ್ನಲ್​ ಸ್ಥಳದಲ್ಲೇ ಸಾವು...ಇಬ್ಬರಿಗೆ ಗಾಯ

By

Published : Sep 12, 2020, 1:38 PM IST

ರಾಜಸ್ಥಾನ: ಸೇನಾ ಸಿಬ್ಬಂದಿಯ ವಾಹನ ಅಪಘಾತಕ್ಕೀಡಾಗಿ ಇಬ್ಬರು ಅಧಿಕಾರಿಗಳು ಸಾವನ್ನಪ್ಪಿರುವ ಘಟನೆ ಬಿಕನಾರ್​​-ಜೈಪುರ ಹೆದ್ದಾರಿಯಲ್ಲಿ ನಡೆದಿದೆ. ಅಪಘಾತದಿಂದಾಗಿ ಸೇನಾ ವಾಹನ ಸಂಪೂರ್ಣ ಜಖಂ ಆಗಿದ್ದು, ಸ್ಥಳದಲ್ಲೇ ಇಬ್ಬರು ಅಧಿಕಾರಿಗಳು ಸಾವನ್ನಪ್ಪಿದರೆ, ಮತ್ತಿಬ್ಬರು ಗಾಯಗೊಂಡಿದ್ದಾರೆ. ಅವರನ್ನು ಪಿಬಿಎಂ ಟ್ರೋಮಾ ಕೇಂದ್ರಕ್ಕೆ ದಾಖಲಿಸಲಾಗಿದೆ.

ಅಪಘಾತಕ್ಕೀಡಾಗಿರುವ ಸೇನಾಧಿಕಾರಿ ವಾಹನ

ಇಲ್ಲಿನ ಸೈರುನಾ ಪೊಲೀಸ್ ಠಾಣೆ ಪ್ರದೇಶದಲ್ಲಿ ಸೇನಾಧಿಕಾರಿಯ ವಾಹನ ನಿಯಂತ್ರಣ ತಪ್ಪಿ ರಸ್ತೆಯಿಂದ ಕೆಳಗುರುಳಿದೆ. ಇದರಿಂದ ಸಫಾರಿ ವಾಹನದಲ್ಲಿದ್ದ ಕರ್ನಲ್​ ಮನೀಶ್ ಸಿಂಗ್ ಚೌವ್ಹಾಣ್​​​​ ಮತ್ತು ಮೇಜರ್ ನೀರಜ್​​ ಶರ್ಮಾ ಮೃತಪಟ್ಟಿದ್ದಾರೆ.

ಅಪಘಾತವಾದ ತಕ್ಷಣ ಸ್ಥಳೀಯರು ಸ್ಥಳಕ್ಕಾಗಮಿಸಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಕುರಿತು ಮಾತನಾಡಿದ ಶೆರುನಾ ಪೊಲೀಸ್ ಠಾಣೆಯ ಎಸ್​​​​ಹೆಚ್​​ಒ ಅಜಯ್​ ಕುಮಾರ್​​​, ಸೇನಾ ವಾಹನ ಬರುವಾಗ ಯಾವುದಾದರು ಪ್ರಾಣಿ ಅಡ್ಡ ಬಂದು ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿರಬಹುದು ಎಂದಿದ್ದಾರೆ. ಅಲ್ಲದೆ ಈ ಕುರಿತು ತನಿಖೆ ನಡೆಸಲಾಗುವುದು ಎಂದಿದ್ದಾರೆ.

ABOUT THE AUTHOR

...view details