ಕರ್ನಾಟಕ

karnataka

ETV Bharat / bharat

ಉಗ್ರ ಸಂಘಟನೆಗೆ ಆರ್ಥಿಕ ನೆರವು... ಹಫೀಜ್​ ಸಯೀದ್ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಕೆ! - ಉಗ್ರ ನಾಯಕ ಹಫೀಜ್​ ಸಯೀದ್

ಉಗ್ರ ಸಂಘಟನೆಗಳಿಗಾಗಿ ಆರ್ಥಿಕ ನೆರವು ನೀಡಿರುವ ಹಫೀಜ್​ ಸಯೀದ್​ ಮೇಲಿನ ಆರೋಪ ಸಾಬೀತುಗೊಂಡಿದೆ. ಈ ಸಂಬಂಧ ವಿಚಾರಣೆ ನಡೆಸಿರುವ ಪೊಲೀಸರು ಪಾಕ್​ ಕೋರ್ಟ್​ಗೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ.

Hafiz Saeed
ಉಗ್ರ ನಾಯಕ ಹಫೀಜ್​ ಸಯೀದ್

By

Published : Dec 11, 2019, 3:07 PM IST

ಇಸ್ಲಾಮಾಬಾದ್​​:2008ರ ಮುಂಬೈ ದಾಳಿಯ ಮಾಸ್ಟರ್​ ಮೈಂಡ್​ ಜಮಾತ್​ ಉದ್​ ದವಾ ಉಗ್ರ ಸಂಘಟನೆ ಮುಖ್ಯಸ್ಥ ಹಫೀಜ್​ ಸಯೀದ್​ ಉಗ್ರ ಸಂಘಟನೆಗಾಗಿ ಆರ್ಥಿಕ ನೆರವು ನೀಡುತ್ತಿರುವ ಆರೋಪ ಕೇಳಿ ಬಂದಿದ್ದು, ಇದೀಗ ಅದೇ ವಿಷಯಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಕೋರ್ಟ್​ಗೆ ವಿಚಾರಣೆ ನಡೆಸಿರುವ ಅಲ್ಲಿನ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ.

ತಾವು ಯಾವುದೇ ರೀತಿಯಲ್ಲೂ ಉಗ್ರ ಸಂಘಟನೆಗಳಿಗೆ ಸಹಾಯ ಮಾಡುತ್ತಿಲ್ಲ ಎಂದು ಈ ಹಿಂದಿನಿಂದಲೂ ಪಾಕ್​ ಜಾಗತಿಕ ಮಟ್ಟದಲ್ಲಿ ಹೇಳುತ್ತಲೇ ಬಂದಿತ್ತು. ಆದರೆ ಇದೀಗ ಅದರ ಮುಖವಾಡ ಮತ್ತೊಮ್ಮೆ ಕಳಚಿ ಬಿದ್ದಿದೆ. ಉಗ್ರ ಸಂಘಟನೆಗಾಗಿ ಆರ್ಥಿಕ ನೆರವು ನೀಡುವುದು ಮತ್ತು ಆರ್ಥಿಕ ನೆರವು ಪಡೆಯುತ್ತಿರುವ ಆರೋಪಕ್ಕಾ ಸಾಕ್ಷ್ಯ ಸಿಕ್ಕಿದ್ದು, ಈ ಸಂಬಂಧ ಕೋರ್ಟ್​ಗೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ.

ಜುಲೈ ತಿಂಗಳಲ್ಲಿ ಪಾಕಿಸ್ತಾನದ ಕೌಂಟರ್ ಟೆರರಿಸಮ್ ಡಿಪಾರ್ಟ್​ಮೆಂಟ್​​ ಪಂಜಾಬ್ ಪ್ರಾಂತ್ಯದ ಪೊಲೀಸರು ಉಗ್ರ ಸಂಘಟನೆಗಳಿಗೆ ಆರ್ಥಿಕ ನೆರವು ನೀಡುತ್ತಿದ್ದ ಆರೋಪದ ಮೇಲೆ ಹಫೀಜ್​ ಸಯೀದ್​ ಹಾಗೂ ಆತನ ಸಂಘಟನೆ ವಿರುದ್ಧ ಎಫ್​ಐಆರ್​ ದಾಖಲು ಮಾಡಿದ್ದರು. ಈಗಾಗಲೇ ಹಫೀಜ್​ ಪಾಕಿಸ್ತಾನದ ಸೇನೆಯ ಬಂಧನದಲ್ಲಿದ್ದು, ಕೋಟ್​ ಲಕಪತ್​ ಜೈಲಿನಲ್ಲಿ ಇರಿಸಲಾಗಿದೆ.

ಮುಂಬೈ ದಾಳಿಯ ಮಾಸ್ಟರ್​ ಮೈಂಡ್​ ಆಗಿರುವ ಈತನನ್ನ ಇತ್ತೀಚೆಗೆ ವಿಶ್ವಸಂಸ್ಥೆ ಅಪಾಯಕಾರಿ ಉಗ್ರರ ಲಿಸ್ಟ್​ಗೆ ಈತನನ್ನು ಸೇರ್ಪಡೆ ಮಾಡಿತ್ತು.

ABOUT THE AUTHOR

...view details