ಕರ್ನಾಟಕ

karnataka

ETV Bharat / bharat

ಹಸಿವು, ದಣಿವಿನಿಂದ ಬಳಲಿ ಸಾವನ್ನಪ್ಪಿದ 80 ವರ್ಷದ ವೃದ್ಧ - palliative care workers

ಕೇರಳದಲ್ಲಿ ಕೊಟ್ಟಾಯಂ ಜಿಲ್ಲೆಯ ಮುಂಡಕಾಯಂನಲ್ಲಿ ವೃದ್ಧ ದಂಪತಿಯನ್ನು ಅವರ ಸ್ವಂತ ಮಗನೇ ರೂಮಿನಲ್ಲಿ ಕೂಡಿಹಾಕಿದ್ದ. ಅವರಲ್ಲಿ ವೃದ್ಧ ಹಸಿವು, ದಣಿವೆಯಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.

Octogenarian starves to death after being locked in room
ಹಸಿವು, ದಣಿವಿನಿಂದ ಬಳಲಿ ಸಾವನ್ನಪ್ಪಿದ 80 ವರ್ಷದ ವೃದ್ಧ

By

Published : Jan 21, 2021, 9:40 AM IST

ಕೊಟ್ಟಾಯಂ(ಕೇರಳ):ಕೊಟ್ಟಾಯಂ ಜಿಲ್ಲೆಯ ಮುಂಡಕಾಯಂನಲ್ಲಿ 80 ವರ್ಷದ ವೃದ್ಧ ಹಸಿವು, ದಣಿವೆಯಿಂದ ಸಾವನ್ನಪ್ಪಿದ್ದಾನೆ. ಆತನನ್ನು ಅವನ ಮಗನೇ ಕೋಣೆಯೊಂದರಲ್ಲಿ ಕೂಡಿ ಬೀಗ ಜಡಿದಿದ್ದ ಎಂದು ತಿಳಿದು ಬಂದಿದೆ.

ಕೇರಳದಲ್ಲಿ ಪೋಡಿಯನ್ ಎಂಬ ವೃದ್ಧ ಹಾಗೂ ಅವನ ಹೆಂಡತಿಯನ್ನು ಅವರ ಸ್ವಂತ ಮಗನೇ ರೂಮಿನಲ್ಲಿ ಕೂಡಿಹಾಕಿದ್ದ. ಅಲ್ಲದೇ ಯಾರೂ ಕೂಡ ಅವರ ಸಹಾಯಕ್ಕೆ ಬರಬಾರದು ಎಂಬ ಕಾರಣಕ್ಕೆ ಅವರನ್ನು ಕೂಡಿ ಹಾಕಿದ್ದ ಕೊಠಡಿಯ ಮುಂದೆ ನಾಯಿ ಕಟ್ಟಿದ್ದ ಎನ್ನಲಾಗಿದೆ.

ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಪೋಡಿಯನ್ ಅವರ ಪತ್ನಿಯನ್ನು ಚಿಕಿತ್ಸೆಗಾಗಿ ಕೊಟ್ಟಾಯಂ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು. ಆದರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿಯೇ ಪೋಡಿಯನ್ ಮೃತಪಟ್ಟರು.

ಆಶಾ ಕಾರ್ಮಿಕರು ಮತ್ತು ಉಪಶಾಮಕ ಆರೈಕೆ ಕಾರ್ಯಕರ್ತರು ಮಂಗಳವಾರ ಈ ಪ್ರದೇಶಕ್ಕೆ ಭೇಟಿ ನೀಡಿದಾಗ ದಂಪತಿಗಳ ಅವಸ್ಥೆ ಬೆಳಕಿಗೆ ಬಂದಿದೆ.

ABOUT THE AUTHOR

...view details