ಕರ್ನಾಟಕ

karnataka

ETV Bharat / bharat

ಶೋಪಿಯಾನ್​​ನಲ್ಲಿ ಗುಂಡಿನ ಕಾಳಗದಲ್ಲಿ ಮೂವರು ಕಾರ್ಮಿಕರು ಹತ... ಸ್ವತಂತ್ರ ತನಿಖೆಗೆ ಆಗ್ರಹ! - ಮೂವರು ಕಾರ್ಮಿಕರ ಹತ

ಜುಲೈ 18ರಂದು ಗುಂಡಿನ ಕಾಳಗದಲ್ಲಿ ಹತರಾಗಿರುವ ಮೂವರು ಉಗ್ರರು ಎಂದು ಸೇನೆ ಹೇಳಿಕೆ ನೀಡಿದ್ದು, ಆದರೆ ಅವರು ಉಗ್ರರಲ್ಲ, ಬದಲಿಗೆ ಸಾಮಾನ್ಯ ಕಾರ್ಮಿಕರು ಎಂಬ ಮಾತು ಕೇಳಿ ಬಂದಿವೆ.

Shopian 'encounter'
Shopian 'encounter'

By

Published : Aug 13, 2020, 2:30 AM IST

Updated : Aug 13, 2020, 5:56 AM IST

ಶ್ರೀನಗರ:2020ರ ಜುಲೈ 18ರಂದು ಜಮ್ಮು-ಕಾಶ್ಮೀರದ ಶೋಪಿಯಾನ್​​ನಲ್ಲಿ ಹತರಾಗಿರುವುದು ಮೂವರು ಉಗ್ರರಲ್ಲ ಬದಲಿಗೆ ಸಾಮಾನ್ಯ ಕಾರ್ಮಿಕರು ಎಂಬ ಮಾತು ಕೇಳಿ ಬಂದಿರುವ ಕಾರಣ ಇದನ್ನ ಸ್ವತಂತ್ರ ತನಿಖೆಗೊಳಪಡಿಸುವಂತೆ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ ಅಮ್ನೆಸ್ಟಿ ಇಂಟರ್​ನ್ಯಾಶನಲ್​​(ಅಂತಾರಾಷ್ಟ್ರೀಯ ಸರ್ಕಾರೇತರ ಸಂಘಟನೆ) ಆಗ್ರಹಿಸಿದೆ.

ಶೋಪಿಯಾನ್​ ಜಿಲ್ಲೆಯಲ್ಲಿ ಮೂವರು ಕಾರ್ಮಿಕರನ್ನ ಕಾನೂನು ಬಾಹಿರವಾಗಿ ಹತ ಮಾಡಲಾಗಿದೆ ಎಂದು ಪ್ರತಿಕ್ರಿಯೆ ನೀಡಿರುವ ಅಮ್ನೆಸ್ಟಿ ಇಂಟರ್​ನ್ಯಾಷನಲ್​ ಇಂಡಿಯಾ, ಕಾನೂನು ಬಾಹಿರ ಕೃತ್ಯಕ್ಕೆ ವಿಚಾರಣೆ ನಡೆಸುವ ಅವಶ್ಯಕತೆ ಇದೆ ಎಂದು ಹೇಳಿದೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ನಿರ್ದೇಶಕ ಅವಿನಾಶ್​ ಕುಮಾರ್​ ಪಾರದರ್ಶಕತೆ ಕಂಡುಕೊಳ್ಳಲು ಈ ತನಿಖೆ ಮಹತ್ವ ಪಡೆದುಕೊಂಡಿದೆ ಎಂದಿದ್ದಾರೆ.

ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳಲ್ಲಿ ಸ್ವತಂತ್ರವಾಗಿ ತನಿಖೆ ನಡೆಸುವ ಅವಶ್ಯಕತೆ ಇದೆ. ಸುಪ್ರೀಂಕೋರ್ಟ್​ ಈಗಾಗಲೇ ಮಿಲಿಟರಿ ನ್ಯಾಯ ವ್ಯವಸ್ಥೆ ಟೀಕಿಸಿದೆ. ಈಗಾಗಲೇ ಭಾರತೀಯ ಮಿಲಿಟರಿ ನ್ಯಾಯ ವ್ಯವಸ್ಥೆಯಲ್ಲಿನ ಅಂತರ್ಗತ ದೋಷಗಳನ್ನ ಭಾರತದ ಮಿಲಿಟರಿ ಕಾನೂನು ತಜ್ಞರು ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ.

ಏನಿದು ಪ್ರಕರಣ?

ಜುಲೈ 18,2020ರಂದು ದಕ್ಷಿಣ ಕಾಶ್ಮೀರದ ಶೋಪಿಯಾನ್​ ಪ್ರದೇಶದಲ್ಲಿ ಮೂವರು ಭಯೋತ್ಪಾದಕರು ಭಾರತೀಯ ಸೇನೆಯಿಂದ ಹತರಾಗಿದ್ದರು. ಆದರೆ ಇದರ ಬಗ್ಗೆ ಹೆಚ್ಚಿನ ವಿವರ ಹಂಚಿಕೊಳ್ಳಲು ಸೇನೆ ಹಿಂದೇಟು ಹಾಕಿತ್ತು. ಇದಾದ ಬಳಿಕ ಮೂವರು ಕಾರ್ಮಿಕರು ನಾಪತ್ತೆಯಾಗಿದ್ದರ ಬಗ್ಗೆ ರಾಜೌರಿ ಪೊಲೀಸ್​ ಠಾಣೆಯಲ್ಲಿ ಕುಟುಂಬಸ್ಥರು ಆಗಸ್ಟ್​​ 6ರಂದು ದೂರು ದಾಖಲು ಮಾಡಿದ್ದರು.

ಆಗಸ್ಟ್​ 19ರಂದು ರಕ್ಷಣಾ ವಕ್ತಾರರು ಮಾಹಿತಿ ನೀಡಿ, ಶೋಪಿಯಾನ್​ ಮೂಲಕ ಹೆಚ್ಚಿನ ಉಗ್ರರು ನುಸುಳುತ್ತಿದ್ದು, ಇದು ನಮ್ಮ ಸೈನಿಕರ ಗಮನಕ್ಕೆ ಬಂದಿದೆ ಎಂದು ಹೇಳಿದ್ದರು. ಜತೆಗೆ ತನಿಖೆ ನಡೆಸಲಾಗುತ್ತಿದೆ ಎಂದಿದ್ದರು.

Last Updated : Aug 13, 2020, 5:56 AM IST

ABOUT THE AUTHOR

...view details