ಕರ್ನಾಟಕ

karnataka

ನುಡಿದಂತೆ ನಡೆದ ಜಗನ್ ಸರ್ಕಾರ, 'ಅಮ್ಮ ವೋಡಿ' ಫಲಾನುಭವಿಗಳ ಖಾತೆಗೆ ಜನವರಿಯಿಂದ ಹಣ

By

Published : Jan 7, 2020, 8:08 AM IST

ವೈಎಸ್ಆರ್ ಪಿಸಿ ಪಕ್ಷ ನೀಡಿದ ಭರವಸೆಯಂತೆ '' ಅಮ್ಮ ವೋಡಿ '' ಯೋಜನೆಯಡಿ ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸುವ ಬಡ ಮಹಿಳೆಯರಿಗೆ 15 ಸಾವಿರ ರೂ ನೀಡುವುದಾಗಿ ಆಂಧ್ರ ಪ್ರದೇಶ ಸರ್ಕಾರ ಸೋಮವಾರ ತಿಳಿಸಿದೆ.

Amma Vodi scheme: AP govt to give Rs 15000 annual aid to each beneficiary from this January
ನುಡಿದಂತೆ ನಡೆದ ಜಗನ್ ಸರ್ಕಾರ, 'ಅಮ್ಮ ವೋಡಿ' ಫಲಾನುಭವಿಗಳ ಖಾತೆಗೆ ಜನವರಿಯಿಂದ ಹಣ

ಅಮರಾವತಿ: ವೈಎಸ್ಆರ್ ಪಿಸಿ ಪಕ್ಷ ನೀಡಿದ ಭರವಸೆಯಂತೆ '' ಅಮ್ಮ ವೋಡಿ '' ಯೋಜನೆಯಡಿ ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸುವ ಬಡ ಮಹಿಳೆಯರಿಗೆ 15 ಸಾವಿರ ರೂ ನೀಡುವುದಾಗಿ ಆಂಧ್ರ ಪ್ರದೇಶ ಸರ್ಕಾರ ಸೋಮವಾರ ತಿಳಿಸಿದೆ.

ಈ ಯೋಜನೆ 2019-20 ರಿಂದ ಕಾರ್ಯರೂಪಕ್ಕೆ ಬರಲಿದ್ದು, ಮಕ್ಕಳ ಸಂಖ್ಯೆ ಲೆಕ್ಕಿಸದೇ ಎಲ್ಲಾ ಪಾಲಕರಿಗೆ ಆರ್ಥಿಕ ನೆರವು ನೀಡಲಾಗುವುದು ಎಂದು ತಿಳಿಸಲಾಗಿದೆ. "ಮಗು 12 ನೇ ತರಗತಿ ಪೂರ್ಣಗೊಳ್ಳುವವರೆಗೆ ಪ್ರತಿವರ್ಷ ಜನವರಿಯಲ್ಲಿ ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು" ಎಂದು ಸರ್ಕಾರ ತಿಳಿಸಿದೆ. ಕಳೆದ ವಾರ ಪ್ರತಿ ಫಲಾನುಭವಿಗೆ 15 ಸಾವಿರ ರೂ.ಗಳ ಆರ್ಥಿಕ ನೆರವು ನೀಡುವ ಆದೇಶ ಹೊರಡಿಸಲಾಗಿದೆ. ಜಿಲ್ಲಾ ಶಿಕ್ಷಣಾಧಿಕಾರಿ ಅಥವಾ ಪ್ರಾದೇಶಿಕ ಶಿಕ್ಷಣಾಧಿಕಾರಿ ಈ ಮೊತ್ತವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಾಕುತ್ತಾರೆ. ಎಲ್ಲಾ ಸರ್ಕಾರಿ, ಖಾಸಗಿ ಅನುದಾನಿತ, ಖಾಸಗಿ ಅನುದಾನರಹಿತ ಶಾಲಾ-ಕಾಲೇಜುಗಳಲ್ಲಿ ಓದುತ್ತಿರುವ ಮಕ್ಕಳಿಗೆ ನೆರವು ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಬಡತನ ರೇಖೆಗಿಂತ ಕೆಳಗಿರುವ ಮಕ್ಕಳ ತಾಯಂದಿರಿಗೆ ಈ ಯೋಜನೆ ಅನ್ವಯಿಸುತ್ತದೆ ಎಂದು ಯ ತಿಳಿಸಿದೆ.

ಫಲಾನುಭವಿಯು ಬಿಪಿಎಲ್ ಪಡಿತರ ಚೀಟಿ ಹೊಂದಿದ್ದು, ವಿದ್ಯಾರ್ಥಿಯು ಶಾಲೆ / ಕಾಲೇಜಿನಲ್ಲಿ ಶೇಕಡಾ 75. ರಷ್ಟು ಹಾಜರಾತಿಯನ್ನು ಹೊಂದಿರಬೇಕು. ಶಾಲೆ ಅಥವಾ ಕಾಲೇಜಿನಿಂದ ಹೊರಗುಳಿಯುವ ವಿದ್ಯಾರ್ಥಿಗಳಿಗೆ ಈ ಯೋಜನೆ ಅನ್ವಯಿಸುದಿಲ್ಲ ಎಂದು ತಿಳಿಸಿದೆ. ಅಲ್ಲದೇ ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿಸುವವರು ಈ ಯೋಜನೆಗೆ ಅರ್ಹರಲ್ಲ. ಈ ಯೋಜನೆಗೆ ಅನಾಥರು ಮತ್ತು ಬೀದಿ ಮಕ್ಕಳು ಸಹ ಅರ್ಹರಾಗಿರುತ್ತಾರೆಂದು ಸರ್ಕಾರ ತಿಳಿಸಿದೆ. ಸ್ವಯಂ ಸೇವಾ ಸಂಸ್ಥೆಗಳಿಗೆ ಸಂಬಂಧಪಟ್ಟ ಇಲಾಖೆಯೊಂದಿಗೆ ಮಾತನಾಡಿ ನಂತರ ಆರ್ಥಿಕ ನೆರವು ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪಾರದರ್ಶಕತೆ ಖಚಿತಪಡಿಸಿಕೊಳ್ಳಲು, ಫಲಾನುಭವಿಗಳ ಪಟ್ಟಿಯನ್ನು ಗ್ರಾಮೀಣ ಮಟ್ಟದಲ್ಲಿ ತಿಳಿಸಲಾಗುವುದು ಎಂದು ಪ್ರಕಟಣೆ ಹೊರಡಿಸಿದೆ.

ABOUT THE AUTHOR

...view details