ಕರ್ನಾಟಕ

karnataka

ETV Bharat / bharat

ಮಸೂದೆ ಯಾರ ಅಧಿಕಾರವನ್ನೂ ಕಿತ್ತುಕೊಳ್ಳಲ್ಲ, ವಂಚಿತರಿಗೆ ಅಧಿಕಾರ ನೀಡುತ್ತೆ: ಅಮಿತ್ ಶಾ - The Bill is not against any Minority, but against Illegal Immigrants

ಲೋಕಸಭೆಯಲ್ಲಿ ಅಂಗೀಕಾರವಾದ ಪೌರತ್ವ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ಗೃಹ ಸಚಿವ ಅಮಿತ್​​ ಶಾ ಸ್ಪಷ್ಟನೆ ಕೊಟ್ಟಿದ್ದಾರೆ.

The Bill is not against any Minority, but against Illegal Immigrants
ಗೃಹ ಸಚಿವ ಅಮಿತ್​​ ಶಾ

By

Published : Dec 10, 2019, 11:57 PM IST

ನವದೆಹಲಿ:ಲೋಕಸಭೆಯಲ್ಲಿ ಅಂಗೀಕಾರವಾದ ಪೌರತ್ವ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್​​ ಶಾ ಸ್ಪಷ್ಟನೆ ಕೊಟ್ಟಿದ್ದಾರೆ.

ಪಾಕಿಸ್ತಾನ, ಆಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಧಾರ್ಮಿಕ ಕಿರುಕುಳ ಒಳಗಾಗುತ್ತಿರುವ ಹಿಂದೂ, ಸಿಖ್, ಬೌದ್ಧ, ಜೈನ್, ಪಾರ್ಸಿ ಮತ್ತು ಕ್ರಿಶ್ಚಿಯನ್ ಸಮುದಾಯಗಳ ವ್ಯಕ್ತಿಗಳಿಗೆ ಭಾರತದಲ್ಲಿ ಪೌರತ್ವ ನೀಡಲು ಈ ಮಸೂದೆ ಮಂಡಿಸಲಾಗಿದೆ. ಇದು ಉದ್ದೇಶಪೂರ್ವಕವಲ್ಲ ಎಂದು ಹೇಳಿದ್ದಾರೆ. ಉದ್ದೇಶಿತ ಮಸೂದೆ ಯಾರ ಅಧಿಕಾರವಾಗಲೀ, ಹಕ್ಕುಗಳನ್ನಾಗಲೀ ಕಿತ್ತುಕೊಳ್ಳುವುದಿಲ್ಲ. ಬದಲಾಗಿ ಅಧಿಕಾರ, ಹಕ್ಕುಗಳಿಂದ ವಂಚಿತರಾದವರ ರಕ್ಷಣೆ ಮಾಡುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಮಸೂದೆ ಬಗ್ಗೆ ಸ್ಪಷ್ಟನೆ

ಈ ಮಸೂದೆ ಅಲ್ಪಸಂಖ್ಯಾತರ ವಿರುದ್ಧ ಅಲ್ಲ. ಇದು ಭಾರತದಲ್ಲಿರುವ ಅಕ್ರಮ ವಲಸಿಗರನ್ನು ಹೊರಹಾಕಲು ಮಂಡಿಸಿರುವ ಮಸೂದೆ. ಸಂಪೂರ್ಣ ಅಕ್ರಮ ವಲಸಿಗರ ವಿರುದ್ಧವಾಗಿದೆ ಎಂದು ಗೃಹ ಸಚಿವರು ವಿವರಿಸಿದ್ದಾರೆ.

ಈ ಮಸೂದೆಯಿಂದಾಗಿ ವಿಧಿ 371ರ ಯಾವೊಂದು ನಿಬಂಧನೆಗಳನ್ನು ಉಲ್ಲಂಘಿಸಿಲ್ಲ. ಈಶಾನ್ಯ ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ಉದ್ದೇಶವನ್ನು ಒಳಗೊಂಡಿದೆ ಎಂದು ತಿಳಿಸಿದ್ರು.

ABOUT THE AUTHOR

...view details