ಕರ್ನಾಟಕ

karnataka

ETV Bharat / bharat

ಕೆಬಿಸಿಯಲ್ಲಿ ಸ್ಪರ್ಧಿ ಜೊತೆ ಟಿಕ್​ಟಾಕ್​ ಮಾಡಿದ್ರು ಅಮಿತಾಭ್.. ಬಿಗ್‌ ಹಾರ್ಟ್‌ ಬಿಗ್‌ಬಿ - Amithabh bachhan tiktok

ಟಿಕ್​ಟಾಕ್​ ಯುವ ಪೀಳಿಗೆಯಲ್ಲಿ ಸಖತ್​ ಟ್ರೆಂಡ್​ ಕ್ರಿಯೇಟ್​ ಮಾಡಿದೆ. ತಮ್ಮ ನೆಚ್ಚಿನ ನಟ-ನಟಿಯರ ಸಿನಿಮಾಗಳ ಡೈಲಾಗ್​ಗೆ ಅಥವಾ ಹಾಡಿಗೆ ಡಬ್​ ಮಾಡುವುದು ಸಾಮಾನ್ಯವಾಗಿದೆ. ಆದರೆ, ಈಗ ಸ್ವತಃ ಅಮಿತಾಭ್ ಬಚ್ಚನ್​ ಕೂಡ ಟಿಕ್​ಟಾಕ್​ ಮಾಡಿದ್ದಾರೆ.

ಟಿಕ್​ಟಾಕ್​ ಮಾಡಿದ್ರು ಅಮಿತಾಭ್..!

By

Published : Aug 31, 2019, 10:25 PM IST

ಬಿಗ್​-ಬಿ ಅಂದ್ರೆನೇ ಹಾಗೆ. ಅವರದು ದೊಡ್ಡ ಹೃದಯ. ಯಾವಾಗಲೂ ಅಭಿಮಾನಿಗಳನ್ನು ಒಂದಲ್ಲಾ ಒಂದು ರೀತಿ ರಂಜಿಸುವ ಅಮಿತಾಭ್​ ಟಿಕ್​ಟಾಕ್​ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಟಿಕ್​ಟಾಕ್​ ಯುವ ಪೀಳಿಗೆಯಲ್ಲಿ ಸಖತ್​ ಟ್ರೆಂಡ್​ ಕ್ರಿಯೇಟ್​ ಮಾಡಿದೆ. ತಮ್ಮ ನೆಚ್ಚಿನ ನಟ-ನಟಿಯರ ಸಿನಿಮಾಗಳ ಡೈಲಾಗ್​ಗೆ ಅಥವಾ ಹಾಡಿಗೆ ಡಬ್​ ಮಾಡುವುದು ಸಾಮಾನ್ಯವಾಗಿದೆ. ಆದರೆ, ಈಗ ಸ್ವತಃ ಅಮಿತಾಭ್ ಬಚ್ಚನ್​ ಕೂಡ ಟಿಕ್​ಟಾಕ್​ ಮಾಡಿದ್ದಾರೆ.

ಕೌನ್​ ಬನೇಗಾ ಕರೋಡ್​ ಪತಿ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ನೋಯ್ಡಾದ ದೀಪಿಕಾ ಶರ್ಮಾ ಎಂಬ ಸ್ಪರ್ಧಿ ಜೊತೆ ಬಿಗ್-ಬಿ ಟಿಕ್​ಟಾಕ್​ ಮಾಡಿದ್ದಾರೆ. ವೃತ್ತಿಯಲ್ಲಿ ಲೆಕ್ಚರರ್​ ಆಗಿರುವ ದೀಪಿಕಾ, 12ನೇ ಪ್ರಶ್ನೆವರೆಗೂ ಆಟ ಆಡಿದರು. ಟಿಕ್​ಟಾಕ್​ ಪ್ರಿಯೆ ಆಗಿರುವ ದೀಪಿಕಾ ಶರ್ಮಾ ಅಮಿತಾಭ್​ ಅವರೊಂದಿಗೆ ಟಿಕ್​ಟಾಕ್​ ಮಾಡುವ ಕೋರಿಕೆ ಇಟ್ಟರು. ಅದಕ್ಕೆ ಅಸ್ತು ಎಂದ ಬಿಗ್​ ಬಿ ಆಟವನ್ನು ಮುಂದುವರೆಸುತ್ತಾರೆ.

12ನೇ ಪ್ರಶ್ನೆ ಬರುವ ವೇಳೆಗೆ ಎಲ್ಲ ಲೈಫ್​ ಲೈನ್​ಗಳನ್ನೂ ಕಳೆದುಕೊಂಡಿದ್ದ ದೀಪಿಕಾ, 6 ಲಕ್ಷ 40 ಸಾವಿರ ರೂ. ಹಣ ಗೆದ್ದು ಕ್ವಿಟ್​ ಆಗ್ತಾರೆ. ಕೆಬಿಸಿ ಶೋನ ಕೊನೆಯಲ್ಲಿ ಮಾತು ಕೊಟ್ಟಂತೆ ಅಮಿತಾಭ್​ ಬಚ್ಚನ್​ ತಮ್ಮದೇ ಸಿನಿಮಾದ ಅಂಗ್ರೇಜಿ ಮೇ ಕೆಹ್ತೇ ಹೈ ಹಾಡಿಗೆ ಟಿಕ್​ಟಾಕ್​ ಮಾಡಿದ್ದಾರೆ.

ABOUT THE AUTHOR

...view details