ಕರ್ನಾಟಕ

karnataka

ETV Bharat / bharat

ಅಲ್ರೋ, ಕೊಹ್ಲಿನ ಕೆಣಕ್ಬೇಡಿ ಅಂದ್ರೂ ಕೇಳಲ್ವಲ್ರೋ... ವಿಂಡೀಸ್​ ಬೌಲರ್​ಗೆ ಬಿಗ್​ ಬಿ ವಾರ್ನ್​ - ಟೀಂ ಇಂಡಿಯಾ ಕ್ಯಾಪ್ಟನ್​​ ವಿರಾಟ್​​​ ಕೊಹ್ಲಿ

ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​​ ಕೊಹ್ಲಿ ವೆಸ್ಟ್​ ಇಂಡೀಸ್​ ಬೌಲರ್​ಗಳ ಮೇಲೆ ಸವಾರಿ ಮಾಡಿದ್ದು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಬಾಲಿವುಡ್​ ನಟ ಅಮಿತಾಭ್​ ಬಚ್ಚನ್​ ಟ್ವೀಟ್​ ಮಾಡಿದ್ದಾರೆ.

Amitabh Bachchan warns Windies
ವಿರಾಟ್​​ ಕೊಹ್ಲಿ ಅಬ್ಬರ

By

Published : Dec 7, 2019, 1:37 PM IST

ಮುಂಬೈ:ವೆಸ್ಟ್​​ ಇಂಡೀಸ್​​ ವಿರುದ್ಧ ನಡೆದ ಮೊದಲ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್​​ ವಿರಾಟ್​​​ ಕೊಹ್ಲಿ ಅಬ್ಬರಿಸಿದ್ದು, ಕೇವಲ 50 ಎಸೆತಗಳಲ್ಲಿ 6 ಬೌಂಡರಿ 6 ಸಿಕ್ಸರ್​ಗಳ ಸಹಿತ ಔಟಾಗದೆ 94 ರನ್​ಗಳಿಸಿ ಗೆಲುವಿನ ರೂವಾರಿಯಾಗಿದ್ದರು.

ನಟ ಅಮಿತಾಬ್​ ಬಚ್ಚನ್​​

2017ರಲ್ಲಿ ಜಮೈಕಾದಲ್ಲಿ ನಡೆದಿದ್ದ ಟಿ-20 ಪಂದ್ಯದಲ್ಲಿ ವಿರಾಟ್​​ ಕೊಹ್ಲಿ ವಿಕೆಟ್​ ಪಡೆದುಕೊಂಡಿದ್ದ ವೆಸ್ಟ್​ ಇಂಡೀಸ್​ ಬೌಲರ್​​​ ಕೆಸ್ರಿಕ್​ ವಿಲಿಯಮ್ಸ್​​​​​ ಸಿಗ್ನೇಚರ್​ ಸೆಲೆಬ್ರೇಷನ್​ ಮಾಡಿದ್ರು. ನಿನ್ನೆ ವಿಲಿಯಮ್ಸ್​ ಅವರ 16ನೇ ಓವರ್​ನಲ್ಲಿ ಸಿಕ್ಸರ್​ ಸೇರಿದಂತೆ 23ರನ್​ಗಳಿಕೆ ಮಾಡಿದ ಕೊಹ್ಲಿ ಸಿಗ್ನೇಚರ್​​ ಸೆಲೆಬ್ರೇಷನ್​ ಮಾಡಿ ಎದುರಾಳಿ ತಂಡದ ಪ್ಲೇಯರ್​ಗೆ ತಿರುಗೇಟು ನೀಡಿದರು.

ಇದೇ ವಿಷಯವನ್ನಿಟ್ಟುಕೊಂಡು ಬಾಲಿವುಡ್​ ನಟ ಅಮಿತಾಭ್​​ ಬಚ್ಚನ್​​ ವಿಂಡೀಸ್​ ಬೌಲರ್​​ಗಳಿಗೆ ವಾರ್ನ್​ ಮಾಡಿದ್ದು, ವಿರಾಟ್​​​ ಕೊಹ್ಲಿನ ಯಾವುದೇ ಕಾರಣಕ್ಕೂ ಕೆಣಕಬೇಡಿ ಎಂದು ಟ್ವೀಟ್ ಮಾಡಿದ್ದಾರೆ.

ಅಮರ್​, ಅಕ್ಬರ್​, ಆಂಟನಿ ಸಿನಿಮಾ ಸ್ಟೈಲ್​​ನಲ್ಲಿ ಟ್ವೀಟ್​ ಮಾಡಿರುವ ಬಿಗ್​ ಬಿ ವೆಸ್ಟ್​ ಇಂಡೀಸ್​ಗೆ ವಾರ್ನ್​ ಮಾಡಿದ್ದಾರೆ.

ಅಮಿತಾಭ್​​ ಮಾಡಿರುವ ಟ್ವೀಟ್​ ಏನು!?

ಅಲ್ರೋ​,ವಿರಾಟ್​ಅನ್ನು ಕೆಣಕಬೇಡಿ ಎಂದು ನಿಮಗೆ ಎಷ್ಟು ಸಲ ಹೇಳ್ಬೇಕು. . ನನ್ನ ಮಾತು ನೀವು ಕೇಳುವುದೇ ಇಲ್ಲ. ಇದೀಗ ಸರಿಯಾಗಿ ತಿರುಗೇಟು ನೀಡಿದ್ದಾರೆ. ನೋಡಿ ವೆಸ್ಟ್​ ಇಂಡೀಸ್​ ಪ್ಲೇಯರ್ಸ್​ ಮುಖ ಎಂದು ಬರೆದುಕೊಂಡಿದ್ದಾರೆ.

ABOUT THE AUTHOR

...view details