ಕೋಲ್ಕತ್ತಾ (ಪಶ್ಚಿಮ ಬಂಗಾಳ):ಹೈ-ವೋಲ್ಟೇಜ್ 2021 ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಹಲವು ದಿನಗಳು ಬಾಕಿ ಇರುವಾಗಲೇ ಬಿಜೆಪಿ ರಾಜ್ಯದಲ್ಲಿ ಈಗಿನಿಂದಲೇ ಭರದ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇಂದಿನ ಬೃಹತ್ ರ‍್ಯಾಲಿ ಅದಕ್ಕೆ ತಾಜಾ ಉದಾಹರಣೆ.
ಅಮಿತ್ ಶಾಗೆ ಅದ್ಧೂರಿ ಸ್ವಾಗತ ವಿಧಾನಸಭೆ ಚುನಾವಣೆಯು ಮುಂದಿನ ವರ್ಷ ನಡೆಯಲಿದ್ದು, ಈಗಿನಿಂದಲೇ ಪಕ್ಷ ಸಂಘಟನೆಗಾಗಿ ಶುಕ್ರವಾರ ಮತ್ತು ಶನಿವಾರ ಎರಡು ದಿನಗಳ ಕಾಲ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಶ್ಚಿಮ ಬಂಗಾಳ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಈ ಪ್ರಯುಕ್ತ ಇಂದು ಬೃಹತ್ ರ‍್ಯಾಲಿ ನಡೆಸಲಾಯಿತು. ಸಾವಿರಾರು ಕಾರ್ಯಕರ್ತರು ಶಾ ಅವರನ್ನು ಅದ್ಧೂರಿಯಾಗಿ ಸ್ವಾಗತ ಮಾಡಿಕೊಂಡರು.
ಅಮಿತ್ ಶಾ ಕಾರ್ಯಕ್ರಮ ವೇಳಾ ಪಟ್ಟಿ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಶಾ, ಇದು ಕೇವಲ ಆರಂಭ. ನೀವು ಹುಟ್ಟು ಹಾಕಿದ ನಾಯಕರು ನಿಮ್ಮ ದುರಾಡಳಿತ, ಭ್ರಷ್ಟಾಚಾರ ಹಾಗೂ ಸ್ವಜನಪಕ್ಷಪಾತದ ಕಾರಣದಿಂದ ನಿಮ್ಮನ್ನು ಬಿಟ್ಟು ಬರುತ್ತಿದ್ದಾರೆ. ವಿಧಾನಸಭೆ ಚುನಾವಣೆ ದಿನಗಳು ಹತ್ತಿರ ಬರುತ್ತಿದ್ದಂತೆ ನೀಮ್ಮನ್ನು ಏಕಾಂಗಿಯನ್ನಾಗಿ ಮಾಡಲಾಗುತ್ತದೆ ಎಂದು ಆಡಳಿತರೂಢ ಪಕ್ಷ, ಟಿಎಂಸಿ ನಾಯಕಿ ಮಮತಾ ಮುಖರ್ಜಿಗೆ ಎಚ್ಚರಿಕೆ ನೀಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬರಲಿದೆ ಎಂದರು.
ಇದನ್ನೂ ಓದಿ : 2 ದಿನಗಳ ಪ್ರವಾಸಕ್ಕಾಗಿ ಕೋಲ್ಕತ್ತಾಗೆ ಬಂದಿಳಿದ ಕೇಂದ್ರ ಸಚಿವ ಅಮಿತ್ ಶಾ
ರ‍್ಯಾಲಿ ಬಳಿಕ ತೃಣಮೂಲ ಕಾಂಗ್ರೆಸ್ ಬಂಡಾಯ ಶಾಸಕ ಸುವೇಂದು ಅಧಿಕಾರಿ ಇಂದು ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.
ಪಶ್ಚಿಮ ಬಂಗಾಳ ರಾಜ್ಯಕ್ಕೆ ಭೇಟಿ ನೀಡಿದ ಅಮಿತ್ ಶಾ ಬಳಿಕ ಮಾತನಾಡಿ, ನನಗೆ ಬಿಜೆಪಿಯೊಂದಿಗೆ ದೀರ್ಘಕಾಲದ ಒಡನಾಟವಿದೆ. ತೃಣಮೂಲ ಕಾಂಗ್ರೆಸ್ ನನ್ನನ್ನು ಅವಮಾನಿಸಿದೆ. ನನ್ನನ್ನು ಅವಮಾನಿಸಿದವರು ಈಗ ನನ್ನನ್ನು ಕಪಟ ಎಂದು ಕರೆಯುತ್ತಿದ್ದಾರೆ. ಭಾರತ ಮಾತೆ ಒಬ್ಬಳನ್ನು ಹೊರೆತುಪಡಿಸಿ ಯಾರೂ ನನ್ನ ತಾಯಿಯಲ್ಲ. ದುರಾಡಳಿತ ಹೆಚ್ಚಾಗಿದೆ. ರಾಜ್ಯದಲ್ಲಿ ಆರ್ಥಿಕ ಸ್ಥಿತಿ ತುಂಬಾ ಕೆಟ್ಟಿದೆ. ಇದರ ಉದ್ಧಾರ ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಾತ್ರ. ಹಾಗಾಗಿ ಈ ರಾಜ್ಯವನ್ನು ಅವರಿಗೆ ಹಸ್ತಾಂತರಿಸಬೇಕಿದೆ. 2021ರ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಸೋಲು ಖಚಿತೆ ಎಂದು ಭವಿಷ್ಯ ನುಡಿದರು.
ಪಶ್ಚಿಮ ಬಂಗಾಳ ರಾಜ್ಯಕ್ಕೆ ಭೇಟಿ ನೀಡಿದ ಅಮಿತ್ ಶಾ ರಾಜ್ಯದ ಹಾಗೂ ಪಕ್ಷದ ಉದ್ಧಾರಕ್ಕಾಗಿ ನಾನು 21 ವರ್ಷಗಳ ಕಾಲ ಕೆಲಸ ಮಾಡಿದೆ. ನನ್ನ ಆ ದಿನಗಳ ಸೇವೆ ಮತ್ತು ತ್ಯಾಗವನ್ನು ನೋಡಿದರೂ ಟಿಎಂಸಿ ಎಂದಿಗೂ ನನ್ನ ಸಹಾಯಕ್ಕೆ ಬರಲಿಲ್ಲ. ಮಾಡಿದ ಕೆಲಸಕ್ಕೂ ಗೌರವ ನೀಡಲಿಲ್ಲ. ಆದರೆ, ಅಮಿತ್ ಶಾ ಮತ್ತು ಇತರ ಬಿಜೆಪಿ ನಾಯಕರು ನನಗೆ ಪ್ರೀತಿಯನ್ನು ನೀಡಿದ್ದಾರೆ ಎಂದು ಸುವೇಂದು ತಮ್ಮ ರಾಜೀನಾಮೆ ಕಾರಣ ನೀಡಿದರು.
ಇದೇ ವೇಳೆ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆ ಸಂಬಂಧ ರಾಜ್ಯ ನಾಯಕರು ಹಾಗೂ ಕಾರ್ಯಕರ್ತರ ಜೊತೆ ಅಮಿತ್ ಶಾ ಚರ್ಚೆ ನಡೆಸಿದರು.