ಕರ್ನಾಟಕ

karnataka

ETV Bharat / bharat

ದೀದಿನಾಡಲ್ಲಿ ಇಂದು ಕೇಂದ್ರ ಸಚಿವ ಅಮಿತ್ ಶಾ ಜನ ಸಂವಾದ್ ರ‍್ಯಾಲಿ - ಮಮತಾ ಬ್ಯಾನರ್ಜಿ

ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಿರುವ ಕಾರಣದಿಂದ ಕೇಂದ್ರ ಸಚಿವ ಅಮಿತ್ ಶಾ ಇಂದು ಪಶ್ಚಿಮ ಬಂಗಾಳದಲ್ಲಿ ವರ್ಚುವಲ್(ವಸ್ತುಶಃ ಇಲ್ಲವೇ ವಿಡಿಯೋ ಕಾನ್ಫರೆನ್ಸ್​​​​​​​ ಮೂಲಕ ಪ್ರಚಾರ) ​ ರ‍್ಯಾಲಿ ಕೈಗೊಂಡಿದ್ದಾರೆ.

amit sha
ಅಮಿತ್ ಶಾ

By

Published : Jun 9, 2020, 7:35 AM IST

ನವದೆಹಲಿ:ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಅಮಿತ್ ಶಾ ಇಂದು ಪಶ್ಚಿಮ ಬಂಗಾಳದಲ್ಲಿ ವರ್ಚುವಲ್​ ರ‍್ಯಾಲಿ ನಡೆಸುತ್ತಾರೆ.

ಕೊರೊನಾ ಹಿನ್ನೆಲೆಯಲ್ಲಿ ಬಹಿರಂಗ ಪ್ರಚಾರಗಳಿಗೆ, ಸಭೆಗಳಿಗೆ ನಿಷೇಧ ಇರುವ ಕಾರಣದಿಂದ ವರ್ಚುವಲ್​ ರ‍್ಯಾಲಿ ನಡೆಸಲಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಭಾಷಣ ಮಾಡಲಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಭಾರತೀಯ ಜನತಾ ಪಾರ್ಟಿ, ''ಪಶ್ಚಿಮ ಬಂಗಾಳದ ಜನ್ ಸಂವಾದ್​ ರ‍್ಯಾಲಿ 11ಕ್ಕೆ ನಡೆಯಲಿದೆ'' ಎಂದು ಮಾಹಿತಿ ನೀಡಿದೆ. ಅಮಿತ್​ ನಡೆಸಲಿರುವ ವಿಡಿಯೋ ಭಾಷಣವು ಬಿಜೆಪಿಯ ಫೇಸ್​ಬುಕ್​ ಹಾಗೂ ಯೂಟ್ಯೂಬ್​ ಪೇಜ್​ಗಳಲ್ಲಿ ಪ್ರಸಾರವಾಗಲಿದೆ.

ವಿಧಾನಸಭಾ ಚುನಾವಣೆ ಚುನಾವಣೆ ಹಿನ್ನೆಲೆಯಲ್ಲಿ ಅಮಿತ್​ ಶಾ ಸರಣಿ ರ‍್ಯಾಲಿಗಳನ್ನು ಕೈಗೊಂಡಿದ್ದು, ಭಾನುವಾರ ಬಿಹಾರದಲ್ಲಿ ಹಾಗೂ ಸೋಮವಾರ ಒಡಿಶಾದಲ್ಲಿ ರ‍್ಯಾಲಿ ಕೈಗೊಂಡಿದ್ದರು.

ABOUT THE AUTHOR

...view details