ಕರ್ನಾಟಕ

karnataka

ETV Bharat / bharat

ಮುನಿದ ಮನೆ ಹಿರಿಯರ ಮನವೊಲಿಕೆ ಯತ್ನ.. ಅಡ್ವಾಣಿ, ಜೋಶಿ ಜತೆಗೆ ಬಿಜೆಪಿ ಅಧ್ಯಕ್ಷ ಅಮಿತ್​ ಶಾ ಮಾತುಕತೆ.. - ಮುರಳಿ ಮನೋಹರ್​ ಜೋಶಿ

ಬಿಜೆಪಿ ಸಹ ಸಂಸ್ಥಾಪಕ ಸದಸ್ಯ ಎಲ್.ಕೆ ಅಡ್ವಾಣಿ ಹಾಗೂ ವಿಹೆಚ್‌ಪಿ ಮುಖಂಡ ಮುರಳಿ ಮನೋಹರ್‌ ಜೋಶಿಗೆ ಬಿಜೆಪಿ ಟಿಕೆಟ್‌ ನಿರಾಕರಿಸಿದೆ. ಇದನ್ನೇ ಕಾಂಗ್ರೆಸ್ ಈಗ ರಾಜಕೀಯ ಅಸ್ತ್ರವಾಗಿ ಪ್ರಯೋಗಿಸುತ್ತಿದೆ. ಇದರ ಮಧ್ಯೆಯೇ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಇಬ್ಬರೂ ನಾಯಕರನ್ನ ಭೇಟಿಯಾಗಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಬಿಜೆಪಿ ಅಧ್ಯಕ್ಷ

By

Published : Apr 8, 2019, 9:15 PM IST

Updated : Apr 8, 2019, 10:45 PM IST

ನವದೆಹಲಿ:ಮುಂಬರುವ ಲೋಕಸಭಾ ಚುನಾವಣೆಗಾಗಿ ಭಾರತೀಯ ಜನತಾ ಪಾರ್ಟಿ ಇಂದು ತನ್ನ ಪ್ರಣಾಳಿಕೆ ರಿಲೀಸ್​ ಮಾಡಿದೆ. ಇದರ ಬೆನ್ನಲ್ಲೇ ಪಕ್ಷದ ನಾಯಕತ್ವದ ಮೇಲೆ ಮುಣಿಸಿಕೊಂಡಿರುವ ಬಿಜೆಪಿ ಹಿರಿಯ ಮುಖಂಡರಾದ ಎಲ್​ಕೆ ಅಡ್ವಾಣಿ ಹಾಗೂ ಮುರಳಿ ಮನೋಹರ್​ ಜೋಶಿ ಭೇಟಿ ಮಾಡಿ ಅಮಿತ್​ ಶಾ ಮಾತನಾಡಿದ್ದಾರೆ.

ಈಗಾಗಲೇ ಪಕ್ಷದಿಂದ ಅವರನ್ನ ಕಡೆಗಣಿಸಿರುವ ಭಾರತೀಯ ಜನತಾ ಪಾರ್ಟಿ ಈ ಸಲದ ಲೋಕಸಭೆಗೆ ಸ್ಪರ್ಧಿಸಿಲು ಟಿಕೆಟ್​ ನೀಡಿಲ್ಲ. ಇದರ ವಿರುದ್ಧ ಈಗಾಗಲೇ ಕಾಂಗ್ರೆಸ್​ ಕೂಡ ಬಿಜೆಪಿ ನಿರ್ಧಾರದ ವಿರುದ್ಧ ಕಿಡಿಕಾರಿದೆ. ಅಡ್ವಾಣಿ ಪ್ರತಿನಿಧಿಸುತ್ತಿದ್ದ ಗಾಂಧಿನಗರದಿಂದ ಅಮಿತ್​ ಶಾ ಹಾಗೂ ಜೋಶಿ ಕಣಕ್ಕಿಳಿಯುತ್ತಿದ್ದ ಕಾನ್ಪುರ್​ದಿಂದ ಸತ್ಯದೇವ್​ ಪಚೌರಿ ಸ್ಪರ್ಧೆ ಮಾಡುತ್ತಿದ್ದಾರೆ.

ಬಿಜೆಪಿ ಅಧ್ಯಕ್ಷ ಅಮಿತ್​ ಶಾ

ಪಕ್ಷದ ಸಹ ಸಂಸ್ಥಾಪಕ ಸದಸ್ಯ ಅಡ್ವಾಣಿ ಹಾಗೂ ಮುರುಳಿ ಮನೋಹರ್​ ಜೋಶಿ ಅಸಮಾಧಾನಗೊಂಡಿರುವ ಹಿನ್ನೆಲೆಯಲ್ಲಿ ಅವರನ್ನ ಅಮಿತ್​ ಶಾ ಭೇಟಿ ಮಾಡಿ, ಪಕ್ಷದ ಪ್ರಚಾರಕ್ಕೆ ಕರೆತರುವ ತಂತ್ರ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ಇಬ್ಬರು ನಾಯಕರು ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿರುವ ಕಾರಣ, ಪಕ್ಷದ ಅಧ್ಯಕ್ಷ ಅಮಿತ್​ ಶಾ ಭೇಟಿ ಮಾಡಿ ಮಾತುಕತೆ ನಡೆಸಿದರು ಎಂದು ತಿಳಿದು ಬಂದಿದೆ. ವಿಶೇಷವೆಂದರೆ ಕಳೆದ ಕೆಲ ದಿನಗಳ ಹಿಂದೆ ಅಡ್ವಾಣಿ ತಮ್ಮ ಬ್ಲಾಗ್​ನಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅಸಮಾಧಾನ ಸಹ ಹೊರಹಾಕಿದ್ದರು.

Last Updated : Apr 8, 2019, 10:45 PM IST

ABOUT THE AUTHOR

...view details