ಕರ್ನಾಟಕ

karnataka

ETV Bharat / bharat

ಬಿಜೆಪಿ 'ಚಾಣಕ್ಯ'ನಿಗೆ ಹಣಕಾಸು ಖಾತೆ? ಜೇಟ್ಲಿ ಬದಲು ಶಾಗೆ ಮಹತ್ವದ ಸ್ಥಾನ? - undefined

ಕಳೆದ ಅವಧಿಯಲ್ಲಿ ವಿತ್ತಸಚಿವರಾಗಿ ಕಾರ್ಯನಿರ್ವಹಿಸಿದ ಅರುಣ್ ಜೇಟ್ಲಿ ಅನಾರೋಗ್ಯದ ಕಾರಣ ಈ ಬಾರಿ ಖಾತೆ ನಿರ್ವಹಿಸಲು ಸಾಧ್ಯವಿಲ್ಲವೆಂದು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಇದರ ಬೆನ್ನಲ್ಲೆ, ಈಗಾಗಲೆ ಬಿಜೆಪಿ ಪಾಳೆಯದಲ್ಲಿ ಚಾಣಕ್ಯ ಎಂದೇ ಗುರ್ತಿಸಿಕೊಂಡಿರುವ ಅಮಿತ್​ ಶಾ ಅವರಿಗೇ ಹಣಕಾಸು ಖಾತೆ ನೀಡುವ ಸಾಧ್ಯತೆಯಿದೆ ಎನ್ನಲಾಗ್ತಿದೆ.

ಅಮಿತ್​ಶಾ

By

Published : May 29, 2019, 4:55 PM IST

Updated : May 30, 2019, 1:36 AM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ 2.0 ಸರ್ಕಾರದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಿತ್ತಸಚಿವರ ಗಾದಿಗೇರಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಕಳೆದ ಅವಧಿಯಲ್ಲಿ ವಿತ್ತಸಚಿವರಾಗಿ ಕಾರ್ಯನಿರ್ವಹಿಸಿದ ಅರುಣ್ ಜೇಟ್ಲಿ ಅನಾರೋಗ್ಯದ ಕಾರಣ ಈ ಬಾರಿ ಖಾತೆ ನಿರ್ವಹಿಸಲು ಸಾಧ್ಯವಿಲ್ಲ ಎಂದು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಇದರ ಬೆನ್ನಲ್ಲೆ, ಈಗಾಗಲೆ ಬಿಜೆಪಿ ಪಾಳೆಯದಲ್ಲಿ ಚಾಣಕ್ಯ ಎಂದೇ ಗುರ್ತಿಸಿಕೊಂಡಿರುವ ಅಮಿತ್​ ಶಾ ಅವರಿಗೇ ಹಣಕಾಸು ಖಾತೆ ನೀಡುವ ಸಾಧ್ಯತೆಯಿದೆ ಎನ್ನಲಾಗ್ತಿದೆ.

ಗಾಂಧಿನಗರ ಲೋಕಸಭೆ ಕ್ಷೇತ್ರದಿಂದ ಅತ್ಯಧಿಕ ಮತ ಗಳಿಸಿ, ಸಂಸತ್ತಿಗೆ ಆಯ್ಕೆಯಾಗಿರುವ ಅಮಿತ್​ ಶಾ, ಇಂದು ರಾಜ್ಯಸಭೆಗೆ ರಾಜೀನಾಮೆ ನೀಡಿದ್ದಾರೆ. ಲೋಕಸಭೆಗೆ ವಿತ್ತ ಸಚಿವರಾಗಿಯೇ ಪದಾರ್ಪಣೆ ಮಾಡಲಿದ್ದಾರೆ ಎಂದು ಹೇಳಲಾಗ್ತಿದೆ.

ಕಳೆದ ಬಾರಿ ಜಿಎಸ್​ಟಿ, ನೋಟು ಅಮಾನ್ಯೀಕರಣದಂತಹ ಮಹತ್ವದ ಸನ್ನಿವೇಶಗಳಲ್ಲಿ ಜೇಟ್ಲಿ ವಿತ್ತ ಸಚಿವರಾಗಿ ಮಹತ್ವದ ಪಾತ್ರ ವಹಿಸಿದ್ದರು. ಈ ಬಾರಿ ಅವರ ಆರೋಗ್ಯ ತೀರ ಹದಗೆಟ್ಟಿರುವ ಕಾರಣ ಇಂತಹ ಜವಾಬ್ದಾರಿಯುತ ಖಾತೆ ನಿರ್ವಹಿಸಲಾಗುತ್ತಿಲ್ಲ ಎಂದು ಪ್ರಧಾನಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

Last Updated : May 30, 2019, 1:36 AM IST

For All Latest Updates

TAGGED:

ABOUT THE AUTHOR

...view details