ನವದೆಹಲಿ:ನಾಡಿನ ನಡೆದಾಡುವ ದೇವರು ತುಮಕೂರು ಸಿದ್ದಗಂಗೆಯ ಶಿವಕುಮಾರ ಸ್ವಾಮೀಜಿ ಜನವರಿ 21 ರಂದು ಲಿಂಗೈಕ್ಯರಾಗಿದ್ದರು. ಅವರ 112ನೇ ಜನ್ಮದಿನ ಇಂದು. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ದಾಮೋದರ್ ದಾಸ್ ಮೋದಿ ಹಾಗೂ ಅಮಿತ್ ಶಾ ಟ್ವೀಟ್ ಮಾಡಿ ಸ್ವಾಮೀಜಿಗಳನ್ನ ಸ್ಮರಿಸಿಕೊಂಡಿದ್ದಾರೆ.
ಇಂದು ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಗಳ ಹುಟ್ಟಿದ ದಿನ... ಮೋದಿ - ಶಾರಿಂದ ಸ್ಮರಣೆ! - ಅಮಿತ್ ಶಾ
ನಡೆದಾಡುವ ದೇವರು ತುಮಕೂರು ಸಿದ್ದಗಂಗಾ ಶ್ರೀಗಳಿಗೆ ಇಂದು 112ನೇ ಜನ್ಮದಿನ. ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಟ್ವೀಟ್ ಮಾಡಿ ಸ್ವಾಮೀಜಿಗಳನ್ನ ಸ್ಮರಿಸಿದ್ದಾರೆ.
ಪ್ರಧಾನಿಗಳು ಬೆಳಗ್ಗೆ ಟ್ವೀಟ್ ಮಾಡಿ ಲಿಂಗೈಕ್ಯರನ್ನ ಸ್ಮರಣೆ ಮಾಡಿದ್ದು, ಅವರ ಜಯಂತಿ ಬಗ್ಗೆ ಬರೆದುಕೊಂಡಿದ್ದಾರೆ. ಶಿವಕುಮಾರ ಸ್ವಾಮೀಜಿಗಳು ನಮ್ಮನ್ನ ಅಗಲಿರಬಹುದು ಆದರೆ, ಅವರು ನಮ್ಮ ಹೃದಯ ಹಾಗೂ ಮನಸಿನಲ್ಲಿ ಅಜರಾಮರರಾಗಿದ್ದಾರೆ. ಅವರ ಕಾಯಕ ಮಾರ್ಗ ಹಾಗೂ ನಡೆ - ನುಡಿ ಲಕ್ಷಾಂತರ ಜನರಿಗೆ ದಾರಿ ದೀಪ ಎಂದು ಸ್ಮರಿಸಿಕೊಂಡಿದ್ದಾರೆ.
ಇನ್ನೊಂದೆಡೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕನ್ನಡದಲ್ಲೇ ಟ್ವೀಟ್ ಮಾಡಿ ನಡೆದಾಡುವ ದೇವರ ಗುಣಗಾನ ಮಾಡಿದ್ದಾರೆ. ನಮ್ಮ ಹೃದಯದಲ್ಲಿ ನೆಲೆಸಿರುವ ತ್ರಿವಿಧ ದಾಸೋಹಿ ಡಾ. ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ 112ನೇ ಜಯಂತಿ ಇಂದು. ಶ್ರೀಗಳ ಜನ್ಮ ದಿನದ ಸಂದರ್ಭದಲ್ಲಿ ಭಕ್ತಿ ಪೂರ್ವಕವಾಗಿ ಅವರ ಸೇವೆಯನ್ನು ಸ್ಮರಿಸುತ್ತೇನೆ. ಲಕ್ಷಾಂತರ ಜನರ ಬಾಳಿಗೆ ಬೆಳಕಾಗಿದ್ದ ಶ್ರೀಗಳ ನಡೆ, ನುಡಿ ನಮ್ಮಂಥ ಲಕ್ಷಾಂತರ ಮಂದಿಗೆ ಆದರ್ಶ. ಮಹಾನ್ ಚೇತನಕ್ಕೆ ಶರಣು ಶರಣಾರ್ಥಿ ಎಂದು ಟ್ವೀಟ್ ಮಾಡಿದ್ದಾರೆ.