ಶ್ರೀನಗರ (ಜಮ್ಮು ಕಾಶ್ಮೀರ):ಚೀನಾ ಗಡಿಯಲ್ಲಿ ಉದ್ವಿಗ್ನ ವಾತಾವರಣದ ನಡುವೆಯೇ ಭಾರತೀಯ ವಾಯುಪಡೆ ದಕ್ಷಿಣ ಕಾಶ್ಮೀರದಲ್ಲಿ ತುರ್ತು ರನ್ವೇ ನಿರ್ಮಿಸಲು ಮುಂದಾಗಿದೆ.
ವಾಯುಪಡೆಯಿಂದ ದಕ್ಷಿಣ ಕಾಶ್ಮೀರದಲ್ಲಿ ತುರ್ತು ರನ್ವೇ: ಚೀನಾ ಬೆದರಿಕೆಗೆ ದಿಟ್ಟ ಉತ್ತರ - ಲೈನ್ ಆಫ್ ಆಕ್ಟುವಲ್ ಕಂಟ್ರೋಲ್
ಭಾರತ- ಚೀನಾ ಗಡಿಯಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿರುವ ಬೆನ್ನಲ್ಲೇ ದಕ್ಷಿಣ ಕಾಶ್ಮೀರದಲ್ಲಿ ತುರ್ತು ರನ್ ವೇ ನಿರ್ಮಿಸಲು ಭಾರತೀಯ ವಾಯುಪಡೆ ಮುಂದಾಗಿದೆ.
ರನ್ ವೇ ನಿರ್ಮಾಣ
ಮೂರು ಕಿಲೋಮೀಟರ್ ಉದ್ದವಿರುವ ಈ ರನ್ವೇ ಅನಂತ್ನಾಗ್ ಜಿಲ್ಲೆಯ ಬಿಜ್ಬೆಹರಾ ಪ್ರದೇಶದಲ್ಲಿರುವ ರಾಷ್ಟ್ರೀಯ ಹೆದ್ದಾರಿ 44ಕ್ಕೆ ಸಮೀಪದಲ್ಲಿದೆ. ರನ್ವೇ ನಿರ್ಮಿಸುವ ಕಾರ್ಯ ಎರಡು ದಿನಗಳ ಹಿಂದೆ ಆರಂಭಗೊಂಡಿದೆ ಎಂದಿರುವ ಅಧಿಕಾರಿಗಳು ಈ ರನ್ವೇಯನ್ನು ಫೈಟರ್ ಜೆಟ್ಗಳನ್ನು ಇಳಿಸಲು ಬಳಸಿಕೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಅನಂತ್ನಾಗ್ ಜಿಲ್ಲಾಡಳಿತದಿಂದ ರನ್ವೇ ಕಾಮಗಾರಿಗೆ ಕಾರ್ಮಿಕರು ಹಾಗೂ ಟ್ರಕ್ಗಳನ್ನು ನೀಡಲಾಗಿದೆ.