ಕರ್ನಾಟಕ

karnataka

By

Published : Sep 19, 2020, 6:00 PM IST

ETV Bharat / bharat

ವಿಶೇಷ ಅಂಕಣ: ಸಾಂಕ್ರಾಮಿಕ ರೋಗದ ನಡುವೆ ತರಕಾರಿ ಬೆಲೆ ಏರಿಕೆಯ ಹೊಸ ಚಿಂತೆ

ಇತ್ತೀಚಿನವರೆಗೂ 6 ಕಿಲೋ ಈರುಳ್ಳಿಯನ್ನು 100 ರೂಪಾಯಿಗೆ ಮಾರಾಟ ಮಾಡಲಾಗಿತ್ತು, ಆದರೆ ಈಗ ಅದು ಪ್ರತಿ ಕೆಜಿಗೆ 40ರೂ.ಗೆ ಏರಿಕೆ ಆಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆಯನ್ನು ನಿಯಂತ್ರಿಸಲು ಕೇಂದ್ರವು ಇತ್ತೀಚೆಗೆ ವಿದೇಶಗಳಿಗೆ ಈರುಳ್ಳಿ ರಫ್ತು ಮಾಡುವುದನ್ನು ನಿಷೇಧಿಸಿದೆ. ಗ್ರಾಹಕರ ಹಿತವನ್ನು ಕಾಪಾಡಲು ಕೇಂದ್ರ ಸರ್ಕಾರವು 50,000 ಟನ್ ಈರುಳ್ಳಿ ಬಫರ್ ಸ್ಟಾಕ್ ಸ್ಥಾಪಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ.

amid-pandemic-soaring-vegetable-prices-becomes-new-worry
ಸಾಂಕ್ರಾಮಿಕ ರೋಗದ ನಡುವೆ ತರಕಾರಿ ಬೆಲೆ ಏರಿಕೆಯ ಹೊಸ ಚಿಂತೆ

ಹೈದರಾಬಾದ್​​:ಸಾಮಾನ್ಯವಾಗಿ ತರಕಾರಿ ಬೆಲೆಗಳು ಸೂರ್ಯನೊಂದಿಗೆ ಸ್ಪರ್ಧಿಸುವ ಬೇಸಿಗೆಯಂತೆ ಏರಿಕೆ ಕಾಣುತ್ತದೆ. ತರಕಾರಿ ಬೆಲೆಯಲ್ಲಿ ಏರಿಕೆ ಇರುತ್ತದೆ. ಸಾಮಾನ್ಯವಾಗಿ ಮಳೆಗಾಲದ ವೇಳೆ ಬೆಲೆ ಇಳಿಮುಖವಾಗಿರುತ್ತದೆ. ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ತೀವ್ರ ಮಳೆ ಇದ್ದಾಗ್ಯೂ, ದೇಶದಾದ್ಯಂತ ತರಕಾರಿಗಳ ಬೆಲೆ ಗಗನಕೇರಿದೆ.

ಕಳೆದ 15 ದಿನಗಳಲ್ಲಿ, ಹೂಕೋಸು, ಹಸಿರು ಬಟಾಣಿ, ಟೊಮ್ಯಾಟೊ, ಆಲೂಗಡ್ಡೆ ಮತ್ತು ಈರುಳ್ಳಿಯ ಬೆಲೆಗಳು ಉತ್ತರ ಭಾರತದಾದ್ಯಂತ ಗಗನಕ್ಕೇರಿವೆ. ಪುಣೆಯಿಂದ ಕೋಲ್ಕತ್ತಾದವರೆಗೆ, ದೆಹಲಿಯಿಂದ ಚೆನ್ನೈವರೆಗೆ ಎಲ್ಲೆಡೆ ತರಕಾರಿ ಸರಬರಾಜವಿನಲ್ಲಿ ಅಸ್ತವ್ಯಸ್ತಗೊಂಡ ಕಾರಣ ಬೆಲೆ ಅಸಹಜವಾಗಿ ಏರಿಕೆ ಕಂಡಿದೆ.

ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ಸರಾಸರಿ ಗ್ರಾಹಕರು ಒಂದು ಕಿಲೋ ಬೀನ್ಸ್‌ನ ಬೆಲೆ ಸುಮಾರು 80ರೂ. ಮತ್ತು ದ್ವಿದಳ ಧಾನ್ಯಗಳು 70ರೂ.ಗಳಷ್ಟಿದೆ ಎಂದು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಭಾರೀ ಮಳೆಯ ಪರಿಣಾಮ ಸ್ಥಳೀಯವಾಗಿ ಬೆಳೆಯುವ ತರಕಾರಿಗಳಾದ. ಸೋರೆಕಾಯಿ, ಸೌತೆಕಾಯಿ, ಹಾಗಲಕಾಯಿ ಇತ್ಯಾದಿ ತರಕಾರಿ ಬೆಳೆಗಳ ಮೇಲೆ ಭಾರೀ ಪರಿಣಾಮ ಬೀರಿವೆ ಮತ್ತು ತರಕಾರಿ ಪೂರೈಕೆಗಳ ಕೊರತೆಯಿಂದಾಗಿ ಸಾರ್ವಜನಿಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

ವಿವಿಧ ಕಾರಣಗಳಿಂದಾಗಿ, ತರಕಾರಿ ಬೆಳೆಯುವ ಭೂಮಿ ವಿಸ್ತೀರ್ಣ ಕಡಿಮೆಯಾಗಿದೆ ಮತ್ತು ಇತರ ರಾಜ್ಯಗಳಿಂದ ಸರಬರಾಜುಗಳನ್ನು ಅವಲಂಬಿಸಿರುವ ಹೈದರಾಬಾದ್ ನಗರವು ಹೆಚ್ಚಿದ ಬಾಡಿಗೆ ವಾಹನಗಳ ಸಾಗಾಟ ವೆಚ್ಚ ಮತ್ತು ಹೆಚ್ಚಿನ ಕಾರ್ಮಿಕ ಶುಲ್ಕದ ಪರಿಣಾಮದಿಂದ ತೀವ್ರವಾಗಿ ತತ್ತರಿಸಿದೆ. ಮತ್ತೊಂದೆಡೆ, ಕರ್ನಾಟಕದಂತಹ ಸ್ಥಳಗಳಲ್ಲಿ, ಹೆಚ್ಚಿನ ಉತ್ಪಾದನೆ ಮತ್ತು ಬೇಡಿಕೆಯ ಕೊರತೆಯಿಂದಾಗಿ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಒಂದೆಡೆ ಡಂಪ್ ಮಾಡುತ್ತಿದ್ದಾರೆ ಅಲ್ಲದೆ ಅದನ್ನು ಉಚಿತವಾಗಿ ವಿತರಿಸುತ್ತಿದ್ದಾರೆ.

ಗುಜರಾತ್‌ನಲ್ಲಿ ನೆಲಗಡಲೆ ಬೆಳೆಗಾರರು, ಹಿಮಾಚಲದಲ್ಲಿ ಟೊಮೆಟೊ, ಪಂಜಾಬ್ ಮತ್ತು ಹರಿಯಾಣದಲ್ಲಿ ಆಲೂಗಡ್ಡೆ, ಮತ್ತು ತೆಲುಗು ಮಣ್ಣಿನಲ್ಲಿ ಬೆಳೆಯುವ ಈರುಳ್ಳಿ ಮತ್ತು ಸೌತೆಕಾಯಿ (ದೊಂಡಕಾಯಾ) ರೈತರಿಗೆ ಇಂತಹ ಕಹಿ ಅನುಭವಗಳು ಎದುರಾಗಿವೆ. ಈಗ ಕೋವಿಡ್ ಭಯದಿಂದ ಸಾರಿಗೆ ಸೌಲಭ್ಯಗಳು ಮತ್ತು ಕಾರ್ಮಿಕರ ಅಲಭ್ಯತೆಯಿಂದಾಗಿ, ವಿವಿಧ ಭಾಗಗಳಲ್ಲಿನ ರೈತರು ತಮ್ಮ ಎಲ್ಲಾ ಪ್ರಯತ್ನಗಳು ವ್ಯರ್ಥವಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ದೈನಂದಿನ ಅಗತ್ಯತೆಗಳ ತರಕಾರಿ ಸರಬರಾಜು ಸರಪಳಿಯ ವ್ಯತ್ಯಾಸದಿಂದಾಗಿ ಗ್ರಾಹಕರು ಭಾರೀ ಬೆಲೆ ನೀಡಿ ತರಕಾರಿ ಖರೀದಿಸಬೇಕಾಗಿದೆ.

ಇತ್ತೀಚಿನವರೆಗೂ 6 ಕಿಲೋ ಈರುಳ್ಳಿಯನ್ನು 100 ರೂಪಾಯಿಗೆ ಮಾರಾಟ ಮಾಡಲಾಗಿತ್ತು, ಆದರೆ ಈಗ ಅದು ಪ್ರತಿ ಕೆಜಿಗೆ 40ರೂ.ಗೆ ಏರಿಕೆ ಆಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆಯನ್ನು ನಿಯಂತ್ರಿಸಲು ಕೇಂದ್ರವು ಇತ್ತೀಚೆಗೆ ವಿದೇಶಗಳಿಗೆ ಈರುಳ್ಳಿ ರಫ್ತು ಮಾಡುವುದನ್ನು ನಿಷೇಧಿಸಿದೆ. ಗ್ರಾಹಕರ ಹಿತವನ್ನು ಕಾಪಾಡಲು ಕೇಂದ್ರ ಸರ್ಕಾರವು 50,000 ಟನ್ ಈರುಳ್ಳಿ ಬಫರ್ ಸ್ಟಾಕ್ ಸ್ಥಾಪಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಈರುಳ್ಳಿ ಮಾತ್ರವಲ್ಲ ವರ್ಷಪೂರ್ತಿ ವಿವಿಧ ತರಕಾರಿಗಳನ್ನು ಸಮಂಜಸವಾದ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡಲು ಬಲವಾದ ಕ್ರಿಯಾ ಯೋಜನೆಯ ಅವಶ್ಯಕತೆಯಿದೆ.

ಒಂದು ಅಂದಾಜಿನ ಪ್ರಕಾರ ದೇಶದಲ್ಲಿ ಉತ್ಪಾದನೆಯಾಗುವ ಹಣ್ಣುಗಳು ಮತ್ತು ತರಕಾರಿಗಳಲ್ಲಿ ಶೇಕಡಾ 18ರಷ್ಟು ತರಿಕಾರಿಗಳು ಸರಿಯಾದ ಶೇಖರಣಾ ಸೌಲಭ್ಯಗಳ ಕೊರತೆಯಿಂದಾಗಿ ವಾರ್ಷಿಕವಾಗಿ ವ್ಯರ್ಥವಾಗುತ್ತದೆ ಎಂದು ವರದಿ ಸೂಚಿಸುತ್ತದೆ. ಬೇಗ ಕೆಡಬಹುದಾದ ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಲು ಅಗತ್ಯವಾದ ಸ್ಥಳಗಳಲ್ಲಿ ಸರಿಯಾದ ಶೀತಲ ಕೇಂದ್ರಗಳ ಸೌಲಭ್ಯಗಳ ಕೊರತೆಯಿಂದಾಗಿ, ದೇಶದಲ್ಲಿ ವಾರ್ಷಿಕವಾಗಿ ಸುಮಾರು 92 ಸಾವಿರ ಕೋಟಿ ನಷ್ಟಉಂಟಾಗುತ್ತಿದೆ.

3 ಕೋಟಿ ಟನ್‌ಗಳ ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಲು ಸಾಮರ್ಥ್ಯವಿರುವ ಶೀತಲ ಕೇಂದ್ರಗಳು ದೇಶದಾದ್ಯಂತ ಲಭ್ಯವಿದೆ ಎಂದು ಸರ್ಕಾರ ಪ್ರತಿಪಾದಿಸುತ್ತಿದ್ದರೂ, ಅವುಗಳಲ್ಲಿ 75-80 ಶೇಕಡಾ ಆಲೂಗಡ್ಡೆ ಸಂಗ್ರಹಕ್ಕಾಗಿ ಮೀಸಲಿಡಲಾಗಿದೆ, ಯೋಜನಾ ಪ್ರಕ್ರಿಯೆಯಲ್ಲಿ ಆದ್ಯತೆಯ ಆಧಾರಿತ ಉಪಕ್ರಮಗಳು ಇಂದಿನ ಅಗತ್ಯ ಎನ್ನುವುದನ್ನು ಇದು ಸೂಚಿಸುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶದ ವಿವಿಧ ಸ್ಥಳಗಳಲ್ಲಿ ವ್ಯಾಪಕವಾಗಿ ಬೆಳೆಯುವ ಸೂಕ್ತ ಬೆಳೆಗಳ ವ್ಯಾಪ್ತಿಯ ಬಗ್ಗೆ ಆಯಾ ಪಂಚಾಯಿತಿಗಳಿಂದ ಮಾಹಿತಿಯನ್ನು ಪಡೆದುಕೊಳ್ಳಬೇಕು ಮತ್ತು ಬೆಳೆಗಳನ್ನು ಬೆಳೆಯಲು ವಿವರವಾದ ಕ್ರಿಯಾ ಯೋಜನೆಯನ್ನು ರೂಪಿಸುವ ಅಗತ್ಯವಿದೆ.

ದೇಶಿಯ ಬಳಕೆಗಾಗಿ ಅಗತ್ಯವಾದ ಉತ್ಪನ್ನಗಳನ್ನು ಬಳಸಿಕೊಂಡ ನಂತರ ಬಾಕಿ ಉಳಿದ ಕೃಷಿ ಉತ್ಪನ್ನಗಳನ್ನು ಬೇಡಿಕೆಗೆ ಅನುಗುಣವಾಗಿ ರಫ್ತು ಮಾಡಬೇಕು. ಇಳುವರಿಯನ್ನು ಹೆಚ್ಚಿಸುವಲ್ಲಿ ಕೃಷಿ ವಿಜ್ಞಾನ ಕೇಂದ್ರಗಳು ಮತ್ತು ಕೃಷಿ ವಿಶ್ವವಿದ್ಯಾಲಯಗಳು ಸಕ್ರಿಯ ಪಾತ್ರವಹಿಸುತ್ತವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಕಾಳಜಿ ವಹಿಸಬೇಕು. ಆ ರೀತಿಯ ಪ್ರಯತ್ನವು ಪುನಶ್ಚೇತನಗೊಳ್ಳುತ್ತಿರುವ ಕೃಷಿ ಭಾರತದ ಹೊರಹೊಮ್ಮುವಿಕೆಯ ಆರಂಭಕ್ಕೆ ನಾಂಧಿ ಆಗಬೇಕು!

ABOUT THE AUTHOR

...view details