ಸೋಲನ್:ಮಾರಣಾಂತಿಕ ಕೋವಿಡ್-19 ಅನ್ನು ಎದುರಿಸಲು, ಮಲೇರಿಯಾಕ್ಕೆ ಬಳಸುವ ಹೈಡ್ರಾಕ್ಸಿಕ್ಲೋರೋಕ್ವಿನ್- ಔಷಧ ಕೊರೊನಾದ ಆಟವನ್ನು ಬದಲಾಯಿಸುತ್ತದೆಂದು ಪರಿಗಣಿಸಲಾಗುತ್ತಿದೆ.
ಕೋವಿಡ್ 19 ಬಿಕ್ಕಟ್ಟಿನ ಸಂದರ್ಭದಲ್ಲಿ ವಿಶ್ವಾದ್ಯಂತ ಹೈಡ್ರಾಕ್ಸಿಕ್ಲೋರೋಕ್ವಿನ್‌ನ ಬೇಡಿಕೆ ಹೆಚ್ಚಾಗುತ್ತಿದ್ದಂತೆ, ಹಿಮಾಚಲ ಪ್ರದೇಶವು ದೇಶೀಯ ಮತ್ತು ಅಂತಾರಾಷ್ಟ್ರೀಯ ಅಗತ್ಯತೆಗಳನ್ನು ಪೂರೈಸುವಂತೆ ಔಷಧ ಉತ್ಪಾದನೆಯನ್ನು ವೇಗಗೊಳಿಸುತ್ತಿದೆ.
ಅದಾಗ್ಯೂ, ಕೊರೊನಾ ವೈರಸ್ನಲ್ಲಿ ಪ್ರಮುಖ ಪಾತ್ರವಹಿಸುವ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧದ ಉತ್ಪಾದನೆಯಲ್ಲಿ ಕಚ್ಚಾ ವಸ್ತುವು ಒಂದು ಅಡಚಣೆಯಾಗುತ್ತಿದೆ. ರಾಜ್ಯದ ಅತಿದೊಡ್ಡ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿಸಲಾದ ಸುಮಾರು 38 ಕೈಗಾರಿಕೆಗಳಲ್ಲಿ ಇದರ ಉತ್ಪಾದನೆ ಪ್ರಾರಂಭವಾಗದಿರುವುದು ಇದೇ ಕಾರಣಕ್ಕಾಗಿ. ಪ್ರಸ್ತುತ ಈ ಔಷಧವನ್ನ ಸುಮಾರು 10 ಕೈಗಾರಿಕೆಗಳಲ್ಲಿ ಉತ್ಪಾದಿಸಲಾಗುತ್ತಿದೆ, ಅವುಗಳು ಸಾಕಷ್ಟು ಕಚ್ಚಾ ವಸ್ತುಗಳನ್ನು ಹೊಂದಿವೆ.