ಕರ್ನಾಟಕ

karnataka

ETV Bharat / bharat

ಕೋವಿಡ್-19: ನಿರ್ಗತಿಕರಿಗೆ ತಲುಪದ ಸೌಲಭ್ಯ, ಆಹಾರ ಸುರಕ್ಷತೆಯೇ ಭಾರತಕ್ಕೆ ಸವಾಲು - ಕೋವಿಡ್-19

ಕೋವಿಡ್-19 ಲಾಕ್‌ಡೌನ್ ಹಿನ್ನೆಲೆ ಬಡವರು ಹಾಗೂ ನಿರ್ಗತಿಕರಿಗೆ ನೆರವಾಗಲು ಸರ್ಕಾರ ವಿವಿಧ ಯೋಜನೆಗಳನ್ನು ಘೋಷಿಸಿದ್ದರೂ, ಅವು ಉದ್ದೇಶಿತ ಜನರನ್ನು ತಲುಪುತ್ತಿಲ್ಲ ಎಂದು ತಿಳಿದುಬಂದಿದೆ.

ಆಹಾರ ಸುರಕ್ಷತೆ

By

Published : Apr 23, 2020, 2:28 PM IST

ಹೈದರಾಬಾದ್: ಸ್ವತಂತ್ರ ಭಾರತದ ಅನೇಕ ನಾಯಕರು ಬಡತನ, ಹಸಿವು ಮತ್ತು ಅನಾರೋಗ್ಯವನ್ನು ನಿರ್ಮೂಲನೆ ಮಾಡಲು ಹಲವು ಕ್ರಮ ಕೈಗೊಂಡರೂ, ಜಾಗತಿಕ ಆರೋಗ್ಯ ಸೂಚ್ಯಂಕ ನಡೆಸಿದ ಸಮೀಕ್ಷೆಯಲ್ಲಿ 117 ದೇಶಗಳ ಪೈಕಿ ಭಾರತ 102ನೇ ಸ್ಥಾನದಲ್ಲಿದೆ.

ಕೋವಿಡ್-19 ಸೋಂಕಿನಿಂದಾಗಿ ದಿನನಿತ್ಯ ಕೋಟ್ಯಂತರ ಕಾರ್ಮಿಕರು ಹಸಿವಿನಿಂದ ಬಳಲುತ್ತಿದ್ದಾರೆ. ಸೋಂಕು ನಿಯಂತ್ರಿಸಲು ರಾಷ್ಟ್ರವ್ಯಾಪಿ ಲಾಕ್‌ಡೌನ್ ಇರುವುದು ಬಡವರಿಗೆ ಮಾರಕವಾಗಿದೆ.

ನಿರ್ಮಾಣ, ಉತ್ಪಾದನೆ ಮತ್ತು ಕೃಷಿ ಕಾರ್ಯಗಳು ಸ್ಥಗಿತಗೊಂಡಿರುವುದರಿಂದ, ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಮೂಲಕ 81 ಕೋಟಿ ನಿರ್ಗತಿಕರಿಗೆ ಆಹಾರ ಧಾನ್ಯಗಳನ್ನು ಪೂರೈಸಲು ಕೇಂದ್ರ ಪ್ರಯತ್ನಿಸುತ್ತದೆ. ಆದರೆ ಹಲವರನ್ನು ತಲುಪಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ.

ಹಲವು ನಿರ್ಗತಿಕರು ಹಾಗೂ ಬಡವರ ಪಾಲಿಗೆ ಲಾಕ್ ಡೌನ್ ಮಾರಕವಾಗಿ ಪರಿಣಮಿಸಿದೆ. ಕೊರೊನಾ ವೈರಸ್​​ನ ಬದಲು ಅವರು ಹಸಿವಿನಿಂದಲೇ ಸಾಯುವ ಭಯ ಎದುರಾಗಿದೆ.

2011ರ ಜನಗಣತಿಯ ಪ್ರಕಾರ, ದೇಶದ ಒಟ್ಟು 121 ಕೋಟಿ ಜನಸಂಖ್ಯೆಯಲ್ಲಿ, 80 ಕೋಟಿ ಜನರು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಫಲಾನುಭವಿಗಳಾಗಿದ್ದರು.

ಇದೀಗ ಭಾರತದ ಜನಸಂಖ್ಯೆ 137 ಕೋಟಿಗಳಾಗಿದ್ದು, ಅದರಲ್ಲಿ 67 ಶೇಕಡಾ ಅಂದರೆ 92 ಕೋಟಿ ಜನ ಈ ಯೋಜನೆಯಡಿಗೆ ಬರಬೇಕು. ಆದರೆ ಕೇವಲ 81 ಕೋಟಿ ಜನ ಮಾತ್ರ ಪಡಿತರ ಚೀಟಿಗಳನ್ನು ಹೊಂದಿದ್ದು, ಅವುಗಳಲ್ಲಿ ಹೆಚ್ಚಿನವು ನಕಲಿ ಎಂದು ತಿಳಿದುಬಂದಿದೆ.

ABOUT THE AUTHOR

...view details