ಕರ್ನಾಟಕ

karnataka

ಲಡಾಕ್​ ಪ್ರದೇಶದಲ್ಲಿ 'ಚಿನೂಕ್' ಹಾರಾಟ ಶುರು: ಶಿಖರ ಪ್ರದೇಶಗಳಿಗೆ ಮಿಲಿಟರಿ ಉಪಕರಣ ಸಾಗಾಟ

By

Published : Feb 21, 2020, 8:04 AM IST

Updated : Feb 21, 2020, 8:39 AM IST

2019ರ ಮಾರ್ಚ್​ನಲ್ಲಿ ಭಾರತಕ್ಕೆ ಬಂದಿದ್ದ ಅಮೆರಿಕ ಮೂಲದ ಚಿನೂಕ್ ಹೆಲಿಕಾಪ್ಟರ್‌ಗಳು ಲಡಾಖ್ ವಲಯದಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿವೆ.

Chinook helicopters have started working in Ladakh,ಲಾಡಾಕ್​ ಪ್ರದೇಶದಲ್ಲಿ ಚಿನೂಕ್ ಕಾರ್ಯ
ಲಾಡಾಕ್​ ಪ್ರದೇಶದಲ್ಲಿ ಚಿನೂಕ್ ಕಾರ್ಯ

ಲಡಾಖ್: ಕಳೆದ ವರ್ಷ ಮಾರ್ಚ್‌ನಲ್ಲಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಭಾರತೀಯ ವಾಯುಪಡೆಯ ಅಮೆರಿಕದ ಚಿನೂಕ್ ಹೆಲಿಕಾಪ್ಟರ್‌ಗಳು ಲಡಾಖ್ ವಲಯದ ಸಿಯಾಚಿನ್ ಹಿಮನದಿ ಪ್ರದೇಶ ಸೇರಿದಂತೆ ಎತ್ತರದ ಪ್ರದೇಶಗಳಲ್ಲಿ ಕಸರತ್ತು ನಡೆಸಿವೆ.

2015 ಸೆಪ್ಟೆಂಬರ್​ನಲ್ಲಿ ಭಾರತ ಸರ್ಕಾರ ಅಮೆರಿಕದೊಂದಿಗೆ 15 ಚಿನೂಕ್​ ಹೆಲಿಕಾಪ್ಟರ್​ ಹಾಗೂ ಅಪಾಚೆ ಹೆಲಿಕಾಪ್ಟರ್​ಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿತ್ತು. ಅದರಂತೆ ಮೊದಲ ಹಂತದಲ್ಲಿ 4 ಹೆಲಿಕಾಪ್ಟರ್​ಗಳು ಕಳೆದ ವರ್ಷ ದೇಶದ ರಕ್ಷಣಾ ಬತ್ತಳಿಕೆ ಸೇರಿದ್ದವು.

ಬಹು ಸಾಮರ್ಥ್ಯವುಳ್ಳ ಈ ಚಿನೂಕ್​ ಹೆಲಿಕಾಪ್ಟರ್​ಗಳು ಭಾರತೀಯ ಸೇನೆಗೆ ಶಕ್ತಿ ತುಂಬಿವೆ. ಸೇನಾಪಡೆ, ಸೇನಾ ಉಪಕರಣಗಳು, ಇಂಧನವನ್ನು ಸಾಗಿಸಲು ಚಿನೂಕ್​ ಅನ್ನು ಬಳಸಬಹುದು. ಅಷ್ಟೇ ಅಲ್ಲದೆ, ಪ್ರಕೃತಿ ವಿಕೋಪದಂತಹ ಸಂದರ್ಭಗಳಲ್ಲಿ ಈ​ ಹೆಲಿಕಾಪ್ಟರ್​ಗಳು ಸಹಕಾರಿಯಾಗಲಿವೆ.

ಲಡಾಖ್ ವಲಯದ ಸಿಯಾಚಿನ್ ಹಿಮನದಿ ಪ್ರದೇಶ ಸೇರಿದಂತೆ ಹೆಚ್ಚಿನ ಎತ್ತರದ ಸ್ಥಳಗಳಗೆ ಮಿಲಿಟರಿ ಉಪಕರಣಗಳನ್ನು ಸಾಗಿಸುತ್ತಿವೆ.

Last Updated : Feb 21, 2020, 8:39 AM IST

ABOUT THE AUTHOR

...view details